Advertisement

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

05:41 PM Nov 06, 2024 | ನಾಗೇಂದ್ರ ತ್ರಾಸಿ |

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಸನಿಹಕ್ಕೆ ತಲುಪಿರುವ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌,‌ ಪ್ಲೋರಿಡಾದಲ್ಲಿನ ಪಾಮ್‌ ಬೀಚ್‌ ಕೌಂಟಿ ಕನ್ ವೆನ್ಶನ್‌ ಸೆಂಟರ್ ನಲ್ಲಿ ನೆರೆದಿದ್ದ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ತನ್ನ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ(Running mate) ಜೆಡಿ ವಾನ್ಸ್‌ ಮತ್ತು ಭಾರತೀಯ-ಅಮೆರಿಕನ್‌ ಮೂಲದ ಪತ್ನಿ ಉಷಾ ಚಿಲುಕುರಿ ವಾನ್ಸ್‌ ಅವರನ್ನು ಹೊಗಳಿ ಅಭಿನಂದಿಸಿದ್ದರು.

Advertisement

“ನಾನು ಮೊದಲನೆಯದಾಗಿ ವಾನ್ಸ್‌ ದಂಪತಿಯನ್ನು ಅಭಿನಂದಿಸುತ್ತೇನೆ. ಅಷ್ಟೇ ಅಲ್ಲ ಜೆಡಿ ವಾನ್ಸ್‌ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾಗಿ ಟ್ರಂಪ್‌ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ ನೆರೆದ ಜನಸಮೂಹ ಬೆಂಬಲ ವ್ಯಕ್ತಪಡಿಸಿ ಘೋಷಣೆ ಕೂಗಿದ್ದರು.

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಮರಳಿ ಅಧಿಕಾರಕ್ಕೆ ಬಂದ ಬಹುದೊಡ್ಡ ಸಾಧನೆಗೆ ನಾವು ನಿಮಿತ್ತ ಮಾತ್ರ ಸಾಕ್ಷಿಯಾಗಿದ್ದೇವೆ ಎಂದು ಜೆಡಿ ವಾನ್ಸ್‌ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದರು.

ಪತಿ ಜೆಡಿ ವಾನ್ಸ್‌ ಅವರ ಜನಪ್ರಿಯತೆ, ರಾಜಕೀಯ ಏಳಿಗೆಯಲ್ಲಿ ಪತ್ನಿ ಉಷಾ ಚಿಲುಕುರಿ ಪಾತ್ರ ಮಹತ್ವದ್ದಾಗಿದೆ. ಈ ಹಿಂದೆ ಜೆಡಿ ವಾನ್ಸ್‌ ಟ್ರಂಪ್‌ ಅವರ ಕಟು ಟೀಕಾಕಾರರಾಗಿದ್ದರು. ಒಮ್ಮೆ ಟ್ರಂಪ್‌ ಅವರನ್ನು ಅಡಾಲ್ಫ್‌ ಹಿಟ್ಲರ್‌ ಗೆ ಹೋಲಿಸಿದ್ದರು. ಆದರೆ ನಂತರ ಬದಲಾದ ಜೆಡಿ ವಾನ್ಸ್‌ ಟ್ರಂಪ್‌ ಪಾಳಯದಲ್ಲಿ ಗುರುತಿಸಿಕೊಂಡು, ಅವರ ನಿರ್ಧಾರಗಳನ್ನು ಬಲವಾಗಿ ಸಮರ್ಥಿಸಿಕೊಳ್ಳತೊಡಗಿದ್ದರು. ಹೀಗೆ ವಾನ್ಸ್‌ ಮತ್ತು ಉಷಾ ಅಮೆರಿಕದ ರಾಜಕೀಯ ಪಥದಲ್ಲಿ ಛಾಪು ಮೂಡಿಸಿದ್ದರು.

ಪತ್ನಿ ಭಾರತೀಯ ಮೂಲದ ಉಷಾ ಚಿಲುಕುರಿ ವಾನ್ಸ್:‌

Advertisement

ಜೆಡಿ ವಾನ್ಸ್‌ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಘೋಷಣೆಯಾಗುತ್ತಿದ್ದಂತೆಯೇ ಇದೀಗ ಎಲ್ಲರ ಚಿತ್ತ ಯಾಲೆ ಯೂನಿರ್ವಸಿಟಿ ಪದವೀಧರ ವಕೀಲೆ ಉಷಾ ವಾನ್ಸ್‌ ಅವರತ್ತ ತಿರುಗಿದೆ. ಹೌದು ಯಾಕೆಂದರೆ ಯೂನೈಟೆಡ್‌ ಸ್ಟೇಟ್ಸ್‌ ನ ಮೊದಲ ಭಾರತೀಯ ಮೂಲದ ಎರಡನೇ ಮಹಿಳೆ(ಉಪಾಧ್ಯಕ್ಷ ಜೆಡಿ ವಾನ್ಸ್‌ )ಯಾಗಲು ಸಜ್ಜಾಗುತ್ತಿರುವುದು.

ಉಷಾ ವಾನ್ಸ್‌ ಭಾರತೀಯ ವಲಸಿಗ ದಂಪತಿಗೆ 1986ರಲ್ಲಿ ಸ್ಯಾನ್‌ ಡಿಯಾಗೋದಲ್ಲಿ ಜನಿಸಿದ್ದರು. ಬಾಲ್ಯದಲ್ಲೇ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದ ಪರಿಣಾಮ ಯಾಲೆ ಯೂನಿರ್ವಸಿಟಿಯಲ್ಲಿ ಇತಿಹಾಸ ಪದವಿ, ಕೇಂಬ್ರಿಡ್ಜ್‌ ವಿವಿಯಿಂದ ಮಾಸ್ಟರ್‌ ಆಫ್‌ ಫಿಲೋಸಫಿ ಪದವಿ ಪಡೆದಿರುವುದಾಗಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಉಷಾ ಪೋಷಕರು ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ವಡ್ಲೂರು ಗ್ರಾಮದವರು. ಈ ನಿಟ್ಟಿನಲ್ಲಿ ಟ್ರಂಪ್‌ ಗೆಲ್ಲಲಿ ಎಂದು ವಡ್ಲೂರು ಗ್ರಾಮಸ್ಥರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಅದಕ್ಕೆ ಕಾರಣ ಜೆಡಿ ವಾನ್ಸ್‌ ಪತ್ನಿ ಉಷಾ ವಾನ್ಸ್‌ ತಾಯ್ನಾಡು ವಡ್ಲೂರು ಇದು ನಮಗೆ ಹೆಮ್ಮೆಯ ವಿಚಾರ ಎಂಬುದು ಗ್ರಾಮದ ನಿವಾಸಿ ರಮಣ ಅವರು ಎಎನ್‌ ಐ ನ್ಯೂಸ್‌ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉಷಾ ರಾಮಶಾಸ್ತ್ರಿಯವರ ಮೊಮ್ಮಗಳು. ನನ್ನ ಪತಿ ಸುಬ್ರಹ್ಮಣ್ಯ ಶಾಸ್ತಿಯವರ ಹಿರಿಯ ಸಹೋದರ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನನ್ನ ಪತಿ ಆರ್‌ ಎಸ್‌ ಎಸ್‌ ಕಾರ್ಯಕರ್ತರಾಗಿದ್ದು, ಎರಡು ವರ್ಷ ಜೈಲಿನಲ್ಲಿ ಕಳೆದಿದ್ದರು. ಎಂದು ಉಷಾ ಅವರ ದೊಡ್ಡಮ್ಮ ಶಾಂತಮ್ಮ ಚಿಲುಕುರಿ ದ ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಉಷಾ ಚಿಲುಕುರಿ ದೊಡ್ಡಮ್ಮ ಶಾಂತಮ್ಮ (96ವರ್ಷ) ಅವರು ಭಾರತದ ಹಿರಿಯ ಪ್ರೊಫೆಸರ್‌ ಗಳಲ್ಲಿ ಒಬ್ಬರಾಗಿದ್ದಾರೆ. ಈವಾಗಲೂ ಪ್ರತಿದಿನ 60 ಕಿಲೋ ಮೀಟರ್‌ ದೂರದ ವಿಶಾಖಪಟ್ಟಣಂ ಯೂನಿರ್ವಸಿಟಿಗೆ ತೆರಳಿ ಭೌತಶಾಸ್ತ್ರ ಪಾಠ ಕಲಿಸುತ್ತಿದ್ದಾರೆ.

ಚಿಲುಕುರಿ ಫ್ಯಾಮಿಲಿ ಮೊದಲಿನಿಂದಲೂ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ಉಷಾ ಅವರ ತಂದೆ ಮತ್ತು ಅಜ್ಜ ಐಐಟಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮೂಲತಃ ನಮ್ಮ ಕುಟುಂಬ ಆಂಧ್ರಪ್ರದೇಶದ ವಡ್ಡೂರು. ಆದರೆ ಉಷಾ ಅಜ್ಜ ರಾಮಶಾಸ್ತ್ರಿ ಚಿಲುಕುರಿ ಅವರು ಚೆನ್ನೈಗೆ ವಲಸೆ ಬಂದು 1959ರಲ್ಲಿ ಅವರು ಐಐಟಿಗೆ ಸೇರ್ಪಡೆಗೊಂಡಿದ್ದರು ಎಂದು ಶಾಂತಮ್ಮ ಚಿಲುಕುರಿ ರಾಯಿಟರ್ಸ್‌ ಗೆ ತಿಳಿಸಿದ್ದಾರೆ.

ಪ್ರಸ್ತುತ ಐಐಟಿಯಲ್ಲಿ ಭೌತಶಾಸ್ತ್ರ ಕಲಿಸುತ್ತಿದ್ದ ರಾಮಶಾಸ್ತ್ರಿಗಳ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಉಷಾ(38ವರ್ಷ) ಅವರ ಪೋಷಕರು 1970ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next