ಹೊಸದಿಲ್ಲಿ : ಆಧಾರ್ ಕಾರ್ಡ್ ತೋರಿಸದೆಯೇ ಈಗಿನ್ನು ಬ್ಯಾಂಕ್ ಖಾತೆ ತೆರೆಯಬಹುದಾಗಿದೆ, ಮೊಬೈಲ್ ಕನೆಕ್ಷನ್ ಪಡೆಯಬಹುದಾಗಿದೆ.
ಇಂದು ಸೋಮವಾರ ರಾಜ್ಯಸಭೆಯಲ್ಲಿ ಪಾಸಾಗಿರುವ ಆಧಾರ್ ಮತ್ತು ಇತರ ಕಾನೂನುಗಳ ತಿದ್ದುಪಡಿ ಮಸೂದೆ 2019 ಪಾಸಾಗಿದ್ದು ಆ ಪ್ರಕಾರ ಬಳಕೆದಾರರು ಇನ್ನು ಆಧಾರ್ ಕಾರ್ಡ್ ಇಲ್ಲದೆಯೂ ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸಂಪರ್ಕ ಪಡೆಯಲು ಸಾಧ್ಯವಾಗಿದೆ.
ಕಳೆದ ಜೂನ್ 24ರಂದು ಕೇಂದ್ರ ಇಲೆಕ್ಟ್ರಾನಿಕ್ ಮತ್ತು ಇನ್‌ಫಾರ್ಮೇಶನ್ ಟೆಕ್ನಾಲಜಿ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ರಾಜ್ಯಸಭೆಯಲ್ಲೂ ಪಾಸಾಗಿರುವ ಈ ಮಸೂದೆಯು 2019ರ ಮಾರ್ಚ್ 2ರಂದು ಹೊರಡಿಸಲಾಗಿದ್ದ ಅಧ್ಯಾದೇಶದ ಸ್ಥಾನವನ್ನು ಪಡೆಯುತ್ತದೆ.
ಸಚಿವ ರವಿ ಶಂಕರ್ ಪ್ರಸಾದ್ ಮಾತನಾಡಿ ಆಧಾರ್ ವ್ಯವಸ್ಥೆಯನ್ನು ಬಿಲ್ ಗೇಟ್ಸ್ ಮತ್ತು ಥಾಮಸ್ ಪ್ರೀಡ್‌ಮನ್ ಉದ್ಧಾಮರು ಕೂಡ ಪ್ರಶಂಸಿಸಿದ್ದಾರೆ. ಸರಕಾರ ಆಧಾರ್ ಸ್ವರೂಪವನ್ನು ಬದಲಾಯಿಸುವುದಿಲ್ಲ; ಆಧಾರ್ ಗೆ ಸಂಬಂಧಿಸಿದ ಕಾನೂನನ್ನು ಮಾತ್ರವೇ ಬದಲಾಯಿಸುತ್ತಿದೆ ಎಂದು ಹೇಳಿದರು.