Advertisement

ಇನ್ಮುಂದೆ ಕ್ಷಣಾರ್ಧದಲ್ಲೇ ವಾಟ್ಸಾಪ್ ಮೂಲಕ ಪಡೆಯಬಹುದು ವ್ಯಾಕ್ಸಿನೇಷನ್ ಪ್ರಮಾಣ ಪತ್ರ  

08:54 PM Aug 08, 2021 | Team Udayavani |

ನವದೆಹಲಿ: ಕೋವಿಡ್ ವ್ಯಾಕ್ಸಿನ್ ಪಡೆದಿರುವ ಪ್ರಮಾಣ ಪತ್ರ ಪಡೆಯುವುದು ಇದೀಗ ಮತ್ತಷ್ಟು ಸುಲಭವಾಗಿದೆ. ವಾಟ್ಸಾಪ್ ಮೂಲಕ ಕೇವಲ ಒಂದು ಮೆಸೇಜ್ ಕಳುಹಿಸುವ ಮೂಲಕ ಕ್ಷಣಾರ್ಧದಲ್ಲಿ ನಿಮ್ಮ ಸರ್ಟಿಫಿಕೇಟ್ ಪಡೆಯುವ ಸೌಲಭ್ಯ ಇದೀಗ ಲಭ್ಯವಾಗಿದೆ.

Advertisement

ಲಸಿಕೆ ಪಡೆದವರು ವಾಟ್ಸಾಪ್‌ ಸಂಖ್ಯೆ +91-9013151515ಗೆ ‘covid certificate’ ಎಂದು ಸಂದೇಶ ಕಳುಹಿಸುವ ಮೂಲಕ MyGov ಕೊರೊನಾ ಸಹಾಯವಾಣಿಯಿಂದ ಪ್ರಮಾಣ ಪತ್ರವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ.

ಒಂದೇ ಒಂದು ಸಂದೇಶ ಕಳುಹಿಸುವ ಮೂಲಕ ಲಸಿಕೆ ಪಡೆದಿದ್ದರ ಪ್ರಮಾಣ ಪತ್ರ ಪಡೆಯಬಹುದು ಎಂದು ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ.


ವಾಟ್ಸಾಪ್‌ನಿಂದ ಸಂದೇಶ ಕಳುಹಿಸಿದ ಕೂಡಲೇ ಮೊಬೈಲ್‌ಗೆ ಒಟಿಪಿಯೊಂದು ಬರಲಿದೆ. ಒಟಿಪಿಯನ್ನು ನಮೂದಿಸಿದರೆ ಪ್ರಮಾಣ ಪತ್ರ ವಾಟ್ಸಾಪ್‌ಗೆ ಬಂದು ಬೀಳಲಿದೆ ಎಂದು ಮಾಂಡವೀಯ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಕೆಲವೊಂದು ರಾಜ್ಯಗಳು ಅಂತಾರಾಜ್ಯ ಪ್ರಯಾಣಕ್ಕೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕೇಳುತ್ತವೆ. ಅಷ್ಟೇ ಏಕೆ ಕೆಲವೊಂದು ಹೋಟೆಲ್ , ಪ್ರವಾಸಿ ತಾಣಗಳಲ್ಲಿ ಪ್ರಮಾಣ ಪತ್ರ ಕಡ್ಡಾಯ ಮಾಡಿವೆ. ಈ ಹಿನ್ನೆಲೆ ಜನರಿಗೆ ಅನುಕೂಲವಾಗಲೆಂದು ವಾಟ್ಸಾಪ್ ಮೂಲಕ ಕ್ಷಣಾರ್ಧದಲ್ಲಿ ಪ್ರಮಾಣ ಪತ್ರ ಪಡೆಯುವ ಸೌಲಭ್ಯ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Advertisement

ಮತ್ತೊಂದು ಗಮನಿಸಬೇಕಾದ ಅಂಶವೆನಂದರೆ ಈಗಾಗಲೇ ಕೆಲವು ಜನರು ವಾಟ್ಸಾಪ್ ಮೂಲಕ ಪ್ರಮಾಣ ಪತ್ರ ಪಡೆಯಲು ಪ್ರಯತ್ನಿಸಿ ನಿರಾಶೆಗೊಂಡಿದ್ದಾರೆ. ವಾಟ್ಸಾಪ್ ಮೂಲಕ ಪಡೆದ ಪ್ರಮಾಣ ಪತ್ರದಲ್ಲಿ ಎರಡು ಡೋಸ್ ಪಡೆದಿರುವ ದಿನಾಂಕ ಒಂದೇ ಯಾಗಿದೆ ಎಂದು ಕೆಲವು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next