Advertisement

X: ಈಗ ಎಕ್ಸ್‌ನಲ್ಲೂ ಕರೆ ಮಾಡಬಹುದು

11:13 PM Aug 31, 2023 | Team Udayavani |

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಹೆಸರು ಮತ್ತು ಚಿಹ್ನೆ ಬದಲಿಸಿಕೊಂಡಿರುವ ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ (ಟ್ವೀಟರ್‌) ಈಗ ತನ್ನ ಬಳಕೆದಾರರಿಗೆ ಮತ್ತೂಂದು ಹೊಸ ಫೀಚರ್‌ ಪರಿಚಯಿಸಲು ಯೋಜಿಸಿದೆ.

Advertisement

ಎಕ್ಸ್‌ ಮೂಲಕ ಬಳಕೆದಾರರು ತಮ್ಮ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ವಿಡಿಯೊ ಹಾಗೂ ಆಡಿಯೊ ಕರೆಗಳನ್ನು ತಮ್ಮ ಸ್ನೇಹಿತರೊಂದಿಗೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಆ್ಯಪಲ್‌, ಆ್ಯಂಡ್ರಾಯ್ಡ, ಟ್ಯಾಬ್‌ ಹಾಗೂ ಪಿಸಿ ಎಲ್ಲದರಲ್ಲಿಯೂ ಎಕ್ಸ್‌ ಬಳಕೆದಾರರು ಈ ಫೀಚರ್‌ ಉಪಯೋಗ ಪಡೆಯಲು ಸಾಧ್ಯವಿದ್ದು, ಶೀಘ್ರವೇ ಹೊಸ ವಿನ್ಯಾಸವನ್ನು ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಫೇಸ್‌ಬುಕ್‌ ಮೆಸೆಂಜರ್‌ಗಳಲ್ಲಿ ಇಂಥದ್ದೊಂದು ಸೌಲಭ್ಯವಿದೆ. ಅದೇ ಮಾದರಿಯಲ್ಲಿ ಎಕ್ಸ್‌ ಕೂಡ ಡಿಎಂ ಎನ್ನುವ ಹೊಸ ಆಯ್ಕೆ ನೀಡುತ್ತಿದೆ. ಈ ಆಯ್ಕೆಯಲ್ಲಿ ಆಡಿಯೊ ಮತ್ತು ವಿಡಿಯೊ ಕಾಲ್‌ ಮಾಡಲು ಶೀಘ್ರವೇ ಅನುಮತಿಸಲಾಗುವುದು ಎಂದು ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next