ಶಿಗ್ಗಾವಿ: ಸಾರಿಗೆ ಇಲಾಖೆಯಿಂದ ವಾಣಿಜ್ಯ ಪರವಾನಗಿ ಪಡೆಯದ ವಾಹನಗಳನ್ನು ತಾಲೂಕಿನಲ್ಲಿ ಅಕ್ರಮವಾಗಿ ಬಾಡಿಗೆಗೆ
ಬಳಸಲಾಗುತ್ತಿದ್ದು ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಅಲ್ಲದೇ ವಾಣಿಜ್ಯ ಪರವಾನಗಿ ಪಡೆದ ವಾಹನ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ.
Advertisement
ಸ್ವಂತ ಬಳಕೆಯ ಉದ್ದೇಶದ ಹೆಸರಲ್ಲಿ ವಾಹನಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಖಾಸಗಿ(ವೈಟ್ ಬೋರ್ಡ್) ನೋಂದಣಿಮಾಡಿಸಿ ಲೈಫ್ ಟೈಂ ಟ್ಯಾಕ್ಸ್‌ನಿಂದ ಮುಕ್ತಿ ಪಡೆದಿದ್ದಲ್ಲದೇ ವಾಹನವನ್ನು ಬಾಡಿಗೆಗೆ ಬಳಸಿ ಲಾಭ ಮಾಡಿಕೊಳ್ಳಲಾಗುತ್ತಿದೆ.
Related Articles
ವಸೂಲಿಗಾಗಿ ವಾಹನವನ್ನೇ ಸೀಜ್ ಮಾಡುತ್ತಾರೆ. ನಮ್ಮ ಜೀವನ ಮತ್ತಷ್ಟು ಬಿಗಡಾಯಿಸಲಿದೆ ಎಂದು ವಾಣಿಜ್ಯ ವಾಹನ ಮಾಲೀಕರು ಕಳವಳ ವ್ಯಕ್ತಪಡಿಸುತ್ತಾರೆ.
Advertisement
ಖಾಸಗಿ ವಾಹನ ಪರವಾನಗಿ ಪಡೆದು ವಾಣಿಜ್ಯ ಬಳಕೆ ಮಾಡುತ್ತಿರುವ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ.*ಸತ್ಯಪ್ಪ ಮಾಳಗೊಂಡ, ಶಿಗ್ಗಾವಿ ಪಿ.ಐ. ವಾಣಿಜ್ಯ ಉದ್ದೇಶಕ್ಕಾಗಿ ಎಲ್ಲ ಸೌಲಭ್ಯದ ದುಬಾರಿ ಬೆಲೆಯ ಕಾರ್‌ನ್ನು ಬ್ಯಾಂಕ್‌ಗಳ ಸಾಲ ಸೌಲಭ್ಯದಡಿ ಖರೀದಿಸಿ ಬಾಡಿಗೆಗೆ ಎದುರು ನೋಡುತ್ತಿದ್ದೇನೆ. ಖಾಸಗಿ ವಾಹನ ಮಾಲೀಕರು ನಮಗಿಂತ ಕಡಿಮೆ ಬೆಲೆಗೆ ಅವರ ಕಾರ್ ಗಳನ್ನು ಬಾಡಿಗೆ ನೀಡುವುದರಿಂದ ಈ ಉದ್ಯೋಗ ನಂಬಿದ ನಮಗೆ ಬಾಡಿಗೆ ಸಿಗುತ್ತಿಲ್ಲ. ಬೇರೆ ಕಡೆ ಸಾಲ ಮಾಡಿ ಕಂತು ಭರಿಸುವಂತಾಗಿದೆ.
*ಮಲ್ಲಪ್ಪ ಮಂಚಿನಕೊಪ್ಪ, ವಾಣಿಜ್ಯ ವಾಹನ ಮಾಲೀಕ. ಸಾರಿಗೆ ಇಲಾಖೆ ಆಯುಕ್ತರಿಗೆ ಮೂರ್‍ನಾಲ್ಕು ತಿಂಗಳ ಹಿಂದೆಯೇ ವಾಹನ ಮಾಲೀಕರ ಸಂಘದ ಮೂಲಕ ಖಾಸಗಿ ಬಾಡಿಗೆ ವಾಹನಗಳ ಮೇಲೆ ಕ್ರಮ ವಹಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರೂ ವಾಹನ ತಪಾಸಣೆ ನಡೆಸಿ ಕ್ರಮ ವಹಿಸಲ್ಲ. ಉದ್ಯೋಗದಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
*ರವಿ ಗಾಣಿಗೇರ ಸವಣೂರು, ವಾಣಿಜ್ಯ
ವಾಹನ ಸಂಘದ ಸದಸ್ಯ. ಪರವಾನಗಿ ಇಲ್ಲದೇ ಓಡಿಸುವ ವಾಹನ ಮಾಲೀಕರು ಕಡಿಮೆ ಬಾಡಿಗೆ ಹೇಳಿ ಹೆಚ್ಚೆಚ್ಚು ದುಡಿಮೆ ಮಾಡಿಕೊಳ್ಳುವಂತಾಗಿದೆ. ಸಾರಿಗೆ ಇಲಾಖೆ ನೀತಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಅನಧಿಕೃತ ವಾಹನ ಮಾಲೀಕರ ಮೇಲೆ ಬಿಗಿ ಕಾನೂನು ಜಾರಿಗೊಳಿಸಬೇಕು.
*ಪುಟ್ಟರಾಜ ಸಂಶಿ, ವಾಹನ ಚಾಲಕ. ■ ದೇವರಾಜ ಸುಣಗಾರ