Advertisement
ಕನ್ನಡ ರಾಜ್ಯೋತ್ಸವ ಬಂದಾಗ ಎಲ್ಲೆಡೆ ಕನ್ನಡ ಹಾಡುಗಳು, ಕನ್ನಡದ ಧ್ವಜ ರಾರಾಜಿಸುತ್ತದೆ. ಯಾವ ಹಬ್ಬಕ್ಕೂ ಕಮ್ಮಿ ಇಲ್ಲ ನಮ್ಮ ನಾಡಹಬ್ಬ. ಅಂದು, ಕಾಲೇಜು- ಕಚೇರಿಗಳಲ್ಲಿರುವ ಅನ್ಯಭಾಷಿಕರಿಗೆ ನಮ್ಮ ಕನ್ನಡದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಅವಕಾಶವೂ ನಮಗಿರುತ್ತದೆ. ಇಷ್ಟು ದೊಡ್ಡ ಹಬ್ಬ ಎಂದ ಮೇಲೆ, ಹಬ್ಬದ ಉಡುಪೂ ಅಷ್ಟೇ ಚೆನ್ನಾಗಿರಬೇಕಲ್ಲವೇ?
ಹಳದಿ ಮತ್ತು ಕೆಂಪು ಬಣ್ಣದ ಕಿವಿ ಓಲೆಗಳೂ ರಾಜ್ಯೋತ್ಸವಕ್ಕೆ ಸೈ ಅನ್ನಿಸುತ್ತವೆ. ಕೆಂಪು ಕಲ್ಲಿನ ಕಿವಿ ಓಲೆಗೆ ಹಳದಿ ಬಣ್ಣದ ಜುಮ್ಕಿ, ಹಳದಿ ಕಲ್ಲಿನ ಕಿವಿ ಓಲೆಗೆ ಕೆಂಪು ಕಲ್ಲಿನ ಗೆಜ್ಜೆ ಥರದ ಬುಗುಡಿ, ಕುಂಕುಮ ಅರಿಶಿನದ ಬಟ್ಟಲಿನಂಥ ಕಿವಿ ಓಲೆ, ಎಸಳು ಬುಗುಡಿ, ಹಳದಿ- ಕೆಂಪು ಬಣ್ಣಗಳ ಬುಗುಡಿ ಹೂವು ಇತ್ಯಾದಿಗಳನ್ನು ತೊಟ್ಟು ನೋಡಬಹುದು. ಇವು ಸಾಂಪ್ರದಾಯಿಕ ಉಡುಗೆಗೆ ಮಾತ್ರವಲ್ಲದೆ ಪಾಶ್ಚಾತ್ಯ ಉಡುಗೆಗೂ ಒಪ್ಪುತ್ತವೆ. ಸೀರೆ, ಕುರ್ತಿ, ಚೂಡಿದಾರ, ಉದ್ದ ಲಂಗ, ಸೂಟ್, ಜೀ®Õ… ಪ್ಯಾಂಟ್, ಸ್ಕರ್ಟ್, ಸಮ್ಮರ್ ಡ್ರೆಸ್- ಹೀಗೆ ಎಲ್ಲದರ ಜೊತೆಗೂ ಕಿವಿಯೋಲೆಗಳು ಚೆನ್ನಾಗಿ ಕಾಣಿಸುತ್ತವೆ.
Related Articles
ಲಂಗ- ದಾವಣಿ, ಸಲ್ವಾರ್- ಕಮೀಜ…, ಸೀರೆ- ರವಿಕೆ ಇತ್ಯಾದಿಗಳ ಜೊತೆ ಬಳೆಗಳನ್ನು ತೊಡುವುದಾದರೆ ಗಾಜಿನ ಬಳೆಗಳನ್ನು ತೊಡಬಹುದು. ಹಳದಿ ಮತ್ತು ಕೆಂಪು ಬಣ್ಣದ ಗಾಜಿನ ಬಳೆಗಳನ್ನು, ಎರಡೂ ಕೈಗಳಿಗೆ ತೊಟ್ಟರೆ ಉಟ್ಟ ಉಡುಗೆಯ ಮೆರುಗು ಇನ್ನೂ ಹೆಚ್ಚಾಗುವುದು ಖಚಿತ.
Advertisement
ಜಾಕೆಟ್ ಜೊತೆಗೆ ಆಕ್ಸೆಸರೀಸ್ಕೆಂಪು ಸೀರೆ ಮೇಲೆ ಕೋಟ್‌ನಷ್ಟು ದೊಡ್ಡದಾದ ಹಳದಿ ಜಾಕೆಟ್ ತೊಡಬಹುದು ಅಥವಾ ಹಳದಿ ಸೀರೆ ಮೇಲೆ ಕೆಂಪು ಜಾಕೆಟ್ ತೊಡಬಹುದು. ಇಲ್ಲವೇ ಸಂಪೂರ್ಣವಾಗಿ ಹಳದಿ ಬಣ್ಣದ ಉಡುಗೆ ತೊಟ್ಟು, ಕೆಂಪು ಬಣ್ಣದ ಆಕ್ಸೆಸರೀಸ್ ತೊಡಬಹುದು. ಸಂಪೂರ್ಣವಾಗಿ ಕೆಂಪು ಬಣ್ಣದ ದಿರಿಸು ತೊಟ್ಟು, ಹಳದಿ ಬಣ್ಣದ ಆಕ್ಸೆಸರೀಸ್ ಧರಿಸಬಹುದು. ಉದಾ: ಕೆಂಪು ಬಣ್ಣದ ರವಿಕೆ ಹಾಗೂ ಸೀರೆಗೆ ಹಳದಿ ಬಣ್ಣದ ಬೊಟ್ಟು, ಕಿವಿ ಓಲೆ, ಸರ, ಮೂಗುತಿ, ಉಂಗುರ, ಬಳೆ, ಕಾಲು ಗೆಜ್ಜೆ, ಪಾದರಕ್ಷೆ, ಪರ್ಸ್ ಅಥವಾ ಬ್ಯಾಗ್, ಇತ್ಯಾದಿ. ಮಿಕ್ಸ್ ಮ್ಯಾಚ್ ಮಾಡಿ…
ಫ್ಯೂಶನ್ ಡ್ರೆಸ್ಸಿಂಗ್ ಹೆಸರಿನಲ್ಲಿ ಯುವತಿಯರು ಸಾಂಪ್ರದಾಯಿಕ ಉಡುಗೆ ಮತ್ತು ಪಾಶ್ಚಾತ್ಯ ಉಡುಗೆಗಳನ್ನು ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ತೊಡುತ್ತಾರೆ. ಉದಾಹರಣೆಗೆ, ಉದ್ದ ಲಂಗ ರವಿಕೆ ಜೊತೆ ಜೀನ್ಸ್ ಪ್ಯಾಂಟ್ ಹಾಗೂ ಶಾಲು, ಅದರ ಮೇಲೆ ಚಿನ್ನದ ಬಣ್ಣದ ಸೊಂಟ ಪಟ್ಟಿಯನ್ನು ಬೆಲ್ಟ್ನಂತೆ ತೊಡುವುದು. ಜೀನ್ಸ್ ಪ್ಯಾಂಟ್ ಬದಲಿಗೆ ಲೆಗಿಂಗ್ಸ್, ಜೆಗಿಂಗ್ಸ್ (ಜೀನ್ಸ್ ಲೆಗಿಂಗ್ಸ್), ಹ್ಯಾರೆಂ ಪ್ಯಾಂಟ್, ಧೋತಿ ಪ್ಯಾಂಟ್ ಮುಂತಾದ ಪ್ಯಾಂಟ್‌ಗಳನ್ನೂ ಉಟ್ಟು ಪ್ರಯೋಗ ಮಾಡಬಹುದು. ಆಗ ಇಂಥ ಉಡುಗೆ ಜೊತೆ ಕಿವಿ ಓಲೆ, ಬಳೆ, ಸರ, ಸೊಂಟ ಪಟ್ಟಿ, ಉಂಗುರ, ಮೂಗು ಬೊಟ್ಟು- ಹೀಗೆ ಎಲ್ಲ ಥರದ ಸಾಂಪ್ರದಾಯಿಕ ಆಭರಣಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಸಿನಿಮಾ ನಟಿಯರು ಪ್ರಯೋಗಿಸಿರುವ ಈ ಶೈಲಿಯನ್ನು ತುಂಬಾ ಮಂದಿ ಫಾಲೋ ಮಾಡುತ್ತಿದ್ದಾರೆ. ಇಂಥ ಉಡುಗೆಯ ಜೊತೆಗೆ ಜಡೆ, ತುರುಬು, ಜುಟ್ಟು ಕಟ್ಟಿಕೊಳ್ಳಬಹುದು. ಇಲ್ಲವೇ, ಕೂದಲನ್ನು ಹಾಗೆ ಬಿಟ್ಟೂ ನೋಡಬಹುದು. – ಅದಿತಿಮಾನಸ ಟಿ.ಎಸ್.