ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸಭಾಂಗಣದಲ್ಲಿ ಬಂಟ್ವಾಳ ತಾ| 19ನೇ ಕ.ಸಾ. ಸಮ್ಮೇಳನ ನ. 23, 24ರಂದು ಜರಗಲಿದೆ. ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾಗಿ ಸಚಿವ ಯು.ಟಿ. ಖಾದರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಸಭಾಂಗಣದಲ್ಲಿ ಅ. 6ರಂದು ಬಂಟ್ವಾಳ ಕ.ಸಾ.ಪ. ಅಧ್ಯಕ್ಷ ಕೆ. ಮೋಹನ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಿ ಘೋಷಣೆ ಮಾಡಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಬಿ.ಎ. ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ, ಕಾರ್ಯಾಧ್ಯಕ್ಷರಾಗಿ ಕೃಷ್ಣ ಕುಮಾರ್ ಪೂಂಜ, ಪ್ರ. ಕಾರ್ಯದರ್ಶಿ ಸುಜಾತಾ ಕುಮಾರಿ, ವಿ. ಎಸ್. ಭಟ್, ಜತೆ ಕಾರ್ಯದರ್ಶಿಗಳಾಗಿ ಹೇಮಾ ಕೆ., ಕರುಣಾಕರ ಕಡೆಗೋಳಿ, ಉಪಾಧ್ಯಕ್ಷರಾಗಿ ಎ.ಸಿ. ಭಂಡಾರಿ, ಮಹಮ್ಮದ್ ಬಾವ, ಕವಿತಾ ದೇವದಾಸ್, ಜಫ್ರುಲ್ಲಾ ಒಡೆಯರ್, ಬಿ.ಎಂ. ಅಬ್ಟಾಸ್ ಅಲಿ, ಉಮೇಶ್ ಬರ್ಕೆ ಅವರನ್ನು ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ಸೋಮಪ್ಪ ಕೋಟ್ಯಾನ್, ಆರ್ಥಿಕ ಸಮಿತಿ ಸಂಚಾಲಕರಾಗಿ ಕೊಡ್ಯಾನ್ ದೇವದಾಸ ಶೆಟ್ಟಿ, ಸ್ವಯಂ ಸೇವಾ ಸಮಿತಿ ಸಂಚಾಲಕರಾಗಿ ಮಹಮ್ಮದ್ ತುಂಬೆ, ನೋಂದಣಿ ಸಮಿತಿಗೆ ಕೆ.ಆರ್. ದೇವದಾಸ್, ಉಮಾ ಚಂದ್ರಶೇಖರ್, ವೇದಿಕೆ ಸಭಾಂಗಣ ಸಮಿತಿ ಸಂಚಾಲಕರಾಗಿ ಮನೋಹರ ಅರ್ಕುಳ, ಸುಕೇಶ್ ಶೆಟ್ಟಿ ತೇವು, ಸರಪಾಡಿ ಅಶೋಕ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಡಿ.ಬಿ. ಅಬ್ದುಲ್ ರಹಿಮಾನ್, ಮೆರವಣಿಗೆ ಸಮಿತಿ ಸಂಚಾಲಕರಾಗಿ ಗೋಪಾಲ ಅಂಚನ್, ಚಂದ್ರಪ್ರಕಾಶ ಶೆಟ್ಟಿ ಶ್ರೀಶೈಲ ತುಂಬೆ, ಸಮ್ಮಾನ ಸಮಿತಿ ಸಂಚಾಲಕರಾಗಿ ತಾರಾನಾಥ ಕೊಟ್ಟಾರಿ, ಮಂಜು ವಿಟ್ಲ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ಮಹಾಬಲೇಶ್ವರ ಹೆಬ್ಟಾರ್, ರಾಜಾ ಬಂಟ್ವಾಳ, ದಿನೇಶ ಶೆಟ್ಟಿ, ರಾಜಾರಾಮ ವರ್ಮ ವಿಟ್ಲ, ಪ್ರಚಾರ ಸಮಿತಿ ಸಂಚಾಲಕರಾಗಿ ಬಂಟ್ವಾಳ ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್ ರಾಯಿ, ವಿಕ್ರಂ ಬರ್ಕೆ, ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೋ ಬಿ.ಸಿ. ರೋಡ್, ಪುಸ್ತಕ ಪ್ರದರ್ಶನ ಸಮಿತಿ ಸಂಚಾಲಕರಾಗಿ ದಿನೇಶ್ ಎನ್. ತುಂಬೆ, ವಸ್ತು ಪ್ರದರ್ಶನ ಸಮಿತಿ ಸಂಚಾಲಕರಾಗಿ ನಾಗೇಶ್ ಪಿ.ಎನ್., ಹಸಿರುವಾಣಿ ಸಮಿತಿ ಸಂಚಾಲಕರಾಗಿ ಬಿ. ನಾರಾಯಣ ಬೆಳ್ಚಡ ಮೇರಮಜಲು, ಪ್ರಶಾಂತ ಅರ್ಕುಳ, ಧನ್ಯರಾಜ್ ಮಜಿ ತುಂಬೆ ಅವರನ್ನು ಸಭೆಯಲ್ಲಿ ಸೂಚಿಸಿ ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗಳ ಸಂಚಾಲಕರನ್ನು ಪದಾಧಿಕಾರಿಗಳನ್ನು ಘೋಷಿಸಲಾಯಿತು. ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷರಾದ ಜಯಾನಂದ ಪೆರಾಜೆ, ಬಿ. ತಮ್ಮಯ, ಉದ್ಯಮಿ ಎಫ್. ಮಹಮ್ಮದ್, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಉಪಸ್ಥಿತರಿದ್ದರು. ಮಂಜು ವಿಟ್ಲ ಸ್ವಾಗತಿಸಿ, ವಂದಿಸಿದರು.