Advertisement

ವಿಂಬಲ್ಡನ್‌: ನೊವಾಕ್‌ ಜೊಕೋವಿಕ್‌, ಅರಿನಾ ಸಬಲೆಂಕಾ ಮುನ್ನಡೆ

10:46 PM Jun 28, 2021 | Team Udayavani |

ಲಂಡನ್‌ : ಸೋಮವಾರ ಆರಂಭಗೊಂಡ ವಿಂಬಲ್ಡನ್‌ ಕೂಟದಲ್ಲಿ ಹಾಲಿ ಚಾಂಪಿಯನ್‌, ವಿಶ್ವದ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದ್ದಾರೆ.

Advertisement

ಬ್ರಿಟನ್ನಿನ ವೈಲ್ಡ್‌ಕಾರ್ಡ್‌ ಆಟಗಾರ ಜಾಕ್‌ ಡ್ರಾಪರ್‌ ವಿರುದ್ಧ 4-6, 6-1, 6-2, 6-2 ಅಂತರದ ಗೆಲುವು ಸಾಧಿಸಿದರು. ಡ್ರಾಪರ್‌ಗೆ ಇದು ಪದಾರ್ಪಣ ಗ್ರ್ಯಾನ್‌ಸ್ಲಾಮ್‌ ಆಗಿದ್ದರೂ ಮೊದಲ ಸೆಟ್‌ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ ಮುಂದಿನ ಸೆಟ್‌ಗಳಲ್ಲಿ ಜೊಕೋವಿಕ್‌ ಅವರ ಆಕ್ರಮಣಕಾರಿ ಆಟದ ಮುಂದೆ ವಿಫ‌ಲರಾದರು. ಈ ಹೋರಾಟ ನಾಲ್ಕು ಸೆಟ್‌ಗಳ ವರೆಗೆ ಸಾಗಿತು.

ಸಬಲೆಂಕಾಗೆ ಗೆಲುವು
ವಿಶ್ವದ ನಂ.2 ಆಟಗಾರ್ತಿ ಅರಿನಾ ಸಬಲೆಂಕಾ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ನಿಕುಲೆಸ್ಕಾ ವಿರುದ್ಧ 6-1, 6-4 ಅಂತರದಿಂದ ಗೆದ್ದು ಶುಭಾರಂಭ ಮಾಡಿದ್ದಾರೆ. ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯ ಎರಡೇ ಸೆಟ್‌ಗಳಿಂದ ಅಂತ್ಯ ಕಂಡಿತು.

ಇದನ್ನೂ ಓದಿ :ಆರ್ಚರಿ ಜಾಗತಿಕ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ದೀಪಿಕಾ ಕುಮಾರಿ

Advertisement

Udayavani is now on Telegram. Click here to join our channel and stay updated with the latest news.

Next