ಮೆಲ್ಬೋರ್ನ್: ಕಳೆದ ವಾರ ಹಲವು ನಾಟಕೀಯ ಘಟನೆಗಳಿಗೆ ಕಾರಣವಾಗಿದ್ದ ವಿಶ್ವದ ಅಗ್ರ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಅವರ ವೀಸಾ ವನ್ನು ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ರದ್ದು ಮಾಡಿದೆ.
ಹೀಗಾಗಿ ಇದೀಗ ಜೊಕೊ ಆಸ್ಟ್ರೇಲಿಯನ್ ಓಪನ್ ಕೂಟದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಜೋಕೊವಿಕ್ ಆಸ್ಟ್ರೇಲಿಯಾದಿಂದ ಗಡಿಪಾರಾಗಬೇಕಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಸರ್ಬಿಯಾದ ಆಟಗಾರನಿಗೆ ಆಸ್ಟ್ರೇಲಿಯನ್ ವೀಸಾ ಸಿಗುವುದು ಅನುಮಾನ ಎನ್ನಲಾಗಿದೆ.
ವಿಕ್ಟೋರಿಯಾ ರಾಜ್ಯ ಸರ್ಕಾರ ಆಸ್ಪ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ಲಸಿಕೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಆದರೆ ಜೊಕೊವಿಕ್ ತಾನು ಲಸಿಕೆ ಪಡೆದಿದ್ದರೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲು ಒಪ್ಪಿರಲಿಲ್ಲ. ಹೀಗಾಗಿ ಜ.5ರಂದು ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆದು ಮೊದಲ ಬಾರಿಗೆ ವೀಸಾ ರದ್ದು ಮಾಡಲಾಗಿತ್ತು. ನಂತರ ಕೋರ್ಟ್ ನಲ್ಲಿ ತೀರ್ಪು ಜೊಕೊ ಪರವಾಗಿ ಬಂದಿತ್ತು.
ಇದನ್ನೂ ಓದಿ:ಗೆಲ್ಲಲು ಉತ್ತಮ ಮಾರ್ಗ ಹುಡುಕಿ..: ಡಿಆರ್ ಎಸ್ ನಿರ್ಧಾರಕ್ಕೆ ಕೊಹ್ಲಿ ತೀವ್ರ ಅಸಮಾಧಾನ
ಜನವರಿ 17ರಿಂದ ಆಸ್ಪ್ರೇಲಿಯನ್ ಓಪನ್ ನಲ್ಲಿ ಹಾಲಿ ಚಾಂಪಿಯನ್ ಆರಂಭವಾಗಲಿದೆ. ಕೂಟಕ್ಕೂ ಮೊದಲು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದ ಅವರು, ‘ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್ ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದರು. ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಕ್ ಷರತ್ತು ಹಾಕಿದ್ದರು. ಆದರೆ ನಂತರ ಹೈಡ್ರಾಮಾ ನಡೆದಿತ್ತು.