Advertisement

ಲೈನ್ ಅಂಪೈರ್ ಗೆ ಚೆಂಡಿನಿಂದ ಬಾರಿಸಿದ ಜೋಕೋವಿಕ್! ಯುಎಸ್ ಓಪನ್ ಕೂಟದಿಂದಲೇ ಔಟ್

12:26 PM Sep 07, 2020 | keerthan |

ನ್ಯೂಯಾರ್ಕ್: ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನುವಾಕ್ ಜೋಕೋವಿಕ್ ಯುಎಸ್ ಓಪನ್ ಕೂಟದಿಂದ ಹೊರಬಿದ್ದಿದ್ದಾರೆ. ಜೋಕೋ ಪಂದ್ಯ ಸೋತು ಕೂಟದಿಂದ ಹೊರಬಿದ್ದಿಲ್ಲ ಬದಲಾಗಿ ಲೈನ್ ಅಂಪೈರ್ ಗೆ ಚೆಂಡಿನಿಂದ ಹೊಡೆದ ಕಾರಣದಿಂದ ಅವರನ್ನು ಕೂಟದಿಂದ ಹೊರಹಾಕಲಾಯಿತು.

Advertisement

ಸ್ಪೇನ್ ನ ಪಾಬ್ಲೋ ಕರ್ರಾನೋ ವಿರುದ್ಧ ಕೂಟದ ನಾಲ್ಕನೇ ಸುತ್ತಿನ ಪಂದ್ಯ ಆಡಲಿಳಿದ ಜೋಕೋ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. 5-6ರ ಅಂತರದಿಂದ ಹಿನ್ನಡೆ ಅನುಭವಿಸಿದ ಜೋಕೋ ಬೇಸರದಿಂದ ಕೈಯಲ್ಲಿದ್ದ ಚೆಂಡನ್ನು ರ್ಯಾಕೆಟ್ ನಿಂದ ಮೈದಾನದ ಹೊರಕ್ಕೆ ಬಾರಿಸಿದರು. ಆದರೆ ಆ ಚೆಂಡು ಲೈನ್ ಅಂಪೈರಿಂಗ್ ಮಾಡುತ್ತಿದ್ದ ಮಹಿಳೆಯ ಮುಖಕ್ಕೆ ಬಡಿದು ಆಕೆ ಕುಸಿದು ಬಿದ್ದರು.

ಕೂಡಲೇ ಅತ್ತ ಓಡಿದ ಜೋಕೋ ಮಹಿಳೆಯನ್ನು ಸಾಂತ್ವಾನ ಮಾಡಿದರು. ತಿಳಿಯದೇ ತಪ್ಪು ಮಾಡಿದೆ ಎಂದು ಕ್ಷಮೇ ಕೇಳಿದರು. ನಂತರ ಯುಎಸ್ ಓಪನ್ ಕೂಟದ ನಿಯಮದಂತೆ ಅಗ್ರ ಕ್ರಮಾಂಕದ ಆಟಗಾರರನ್ನು ಅನರ್ಹಗೊಳಿಸಲಾಯಿತು.

ನಡಾಲ್ , ಫೆಡರರ್ ಅನುಪಸ್ಥಿಯಲ್ಲಿ ಯುಎಸ್ ಓಪನ್ ಕಪ್ ಗೆಲ್ಲುವ ಹಾಟ್ ಫೇವರೇಟ್ ಆಗಿದ್ದ ನುವಾನ್ ಜೋಕೋವಿಕ್ ಈ ರೀತಿ ಕೂಟದಿಂದ ಔಟ್ ಆಗಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.

Advertisement

ಇದನ್ನೂ ಓದಿ: ಮತ್ತೆ ಮುಳುಗಿದ ಆಸೀಸ್ ನೌಕೆ: ಬಟ್ಲರ್ – ಮಲಾನ್ ಸಾಹಸದಿಂದ ಟಿ 20 ಸರಣಿ ಗೆದ್ದ ಇಂಗ್ಲೆಂಡ್

ಕ್ಷಮೆ ಕೋರಿದ ಜೋಕೋ

ಘಟನೆಯ ನಂತರ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಜೋಕೋ, ಘಟನೆಯಿಂದ ನನಗೆ ತುಂಬಾ ಬೇಜಾರಾಗಿದೆ. ತಿಳಿಯದೇ ನನ್ನಿಂದ ತಪ್ಪಾಗಿದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next