Advertisement

ಅಡಿಲೇಡ್‌ ಟೆನಿಸ್‌: ನೊವಾಕ್ ಜೊಕೊವಿಕ್ ಕ್ವಾರ್ಟರ್‌ಫೈನಲಿಗೆ

10:53 PM Jan 05, 2023 | Team Udayavani |

ಅಡಿಲೇಡ್‌: ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಕಠಿಣ ಹೋರಾಟದಲ್ಲಿ ಕ್ವೆಂಟಿನ್‌ ಹೇಲ್ಸ್‌ ಅವರನ್ನು ಸೋಲಿಸಿ ಅಡಿಲೇಡ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದಲ್ಲಿ ಕ್ವಾರ್ಟರ್‌ಫೈನಲಿಗೇರಿದರು.

Advertisement

7-6 (3), 7-6 (5) ಸೆಟ್‌ಗಳಿಂದ ಜಯಭೇರಿ ಬಾರಿಸಿದ ಜೊಕೊವಿಚ್‌ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಡೆನಿಸ್‌ ಶಪೋವ್ಯಾಲೋವ್‌ರನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ಪಂದ್ಯದಲ್ಲಿ ರೋಮನ್‌ ಸಫಿಯುಲಿನ್‌ ಅವರನ್ನು 6-4, 6-3 ಸೆಟ್‌ಗಳಿಂದ ಮಣಿಸಿದ್ದರು. ಮುಂಬರುವ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ಗೆ ಸಿದ್ಧತೆ ನಡೆಸಲು ಜೊಕೊವಿಚ್‌ ಸಹಿತ ಹೆಚ್ಚಿನೆಲ್ಲ ಪ್ರಮುಖ ಆಟಗಾರರು ಅಭ್ಯಾಸಕ್ಕಾಗಿ ಈ ಕೂಟದಲ್ಲಿ ಭಾಗವಹಿಸುತ್ತಾರೆ. ವ್ಯಾಕ್ಸಿನ್‌ ಪಡೆಯದ ಹಿನ್ನೆಲೆಯಲ್ಲಿ ಜೊಕೊವಿಚ್‌ ಕಳೆದ ವರ್ಷ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡಿರಲಿಲ್ಲ. ಆದರೆ ಈ ಬಾರಿ ನಿರ್ಬಂಧ ಸಡಿಲಿಸಿದ್ದರಿಂದ ಈ ವರ್ಷ ಆಟಲು ಅವಕಾಶ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next