ಕೇಪ್ ಟೌನ್: ಸರ್ಬಿಯಾದ ಪ್ರಸಿದ್ಧ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಪ್ರವೇಶ ವೀಸಾವನ್ನು ರದ್ದುಗೊಳಿಸಿದೆ ಎಂದು ಆಸ್ಟ್ರೇಲಿಯಾ ಗುರುವಾರ ಹೇಳಿದೆ.
ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದ ಪುರಾವೆಗಳಿಲ್ಲದೆ ಪಂದ್ಯಾವಳಿಯಲ್ಲಿ ಆಡಲು ವೈದ್ಯಕೀಯ ವಿನಾಯಿತಿ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ನಂಬರ್ 1 ಆಟಗಾರ ನೊವಾಕ್ ಜೊಕೊವಿಕ್ ಮೆಲ್ಬೋರ್ನ್ ಗೆ ಬಂದಿಳಿದಿದ್ದರು. 9 ಬಾರಿಯ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಜೋಕೋವಿಕ್, ಮೆಲ್ಬರ್ನ್‌ಗೆ ಬಂದಿಳಿದರೂ ವೀಸಾ ಸಮಸ್ಯೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ತಡೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಜೋಕೋವಿಕ್ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಆಡುವುದು ಅನುಮಾನ ಎನಿಸಿದೆ.
ವಿಕ್ಟೋರಿಯಾ ರಾಜ್ಯ ಸರ್ಕಾರ ಆಸ್ಪ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ಲಸಿಕೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಆಸ್ಪ್ರೇಲಿಯಾ ಸರ್ಕಾರದ ಗೃಹ ಸಚಿವೆ ಕರೆನ್ ಆ್ಯಂಡ್ರೂಸ್, ‘ಆಸ್ಪ್ರೇಲಿಯಾದ ಗಡಿ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಟೆನಿಸ್ ತಾರೆಗಳಿಗೂ ನಿಮಯ ಅನ್ವಯಿಸಲಿದೆ ಎಂದಿದ್ದಾರೆ. ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್, ಜೋಕೋವಿಕ್ ವೈದ್ಯಕೀಯ ಅನುಮತಿ ಪಡೆದಿದ್ದಕ್ಕೆ ಸೂಕ್ತ ದಾಖಲೆ ಒದಗಿಸಲು ಕೇಳಿದ್ದು, ದಾಖಲೆ ಒದಗಿಸದಿದ್ದರೆ ಮನೆಗೆ ಮರಳುವಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ವನಿತಾ ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ಜೆಮಿಮಾ, ಶಿಖಾ ಪಾಂಡೆಗಿಲ್ಲ ಜಾಗ!
ಜನವರಿ 17ರಿಂದ ಆಸ್ಪ್ರೇಲಿಯನ್ ಓಪನ್ ನಲ್ಲಿ ಹಾಲಿ ಚಾಂಪಿಯನ್ ಆರಂಭವಾಗಲಿದೆ. ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಕ್ ಪಾಲ್ಗೊಳ್ಳುವುದಾಗಿ ಮಂಗಳವಾರದಷ್ಟೇ ಖಚಿತಪಡಿಸಿದ್ದರು. ಈ ಬಗ್ಗೆ ಮಂಗಳವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್ ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದರು. ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಕ್ ಷರತ್ತು ಹಾಕಿದ್ದರು.