Advertisement

ವಿಶ್ವದ ನಂ.1 ಟೆನಿಸಿಗ ಜೊಕೋ ‘ಗೋಲ್ಡನ್‌ ಸ್ಲಾಮ್‌’ಕನಸು ಛಿದ್ರ

10:44 PM Jul 30, 2021 | Team Udayavani |

ಟೋಕಿಯೊ: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಅವರ “ಗೋಲ್ಡನ್‌ ಸ್ಲಾಮ್‌’ ಕನಸು ಶುಕ್ರವಾರ ಒಲಿಂಪಿಕ್ಸ್‌ ಅಂಗಳದಲ್ಲಿ ಛಿದ್ರಗೊಂಡಿದೆ. ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 3 ಸೆಟ್‌ಗಳ ಕಾದಾಟದಲ್ಲಿ ಸೋತು ನಿರ್ಗಮಿಸಿದರು. ಜ್ವೆರೇವ್‌ ಗೆಲುವಿನ ಅಂತರ 1-6, 6-3, 6-1.

Advertisement

ಗೋಲ್ಡ್‌ ಮೆಡಲ್‌ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್‌ ಜ್ವೆರೇವ್‌ ರಶ್ಯದ ಕರೆನ್‌ ಕಶನೋವ್‌ ವಿರುದ್ಧ ಸೆಣಸಲಿದ್ದಾರೆ. ಕಶನೋವ್‌ ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟ ಅವರನ್ನು 6-3, 6-3ರಿಂದ ಮಣಿಸಿದರು. ಜೊಕೋವಿಕ್‌-ಬುಸ್ಟ ಇನ್ನು ಕಂಚಿನ ಸ್ಪರ್ಧೆಗೆ ಇಳಿಯಲಿದ್ದಾರೆ.

2021ರ ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಪ್ರಶಸ್ತಿ ಎತ್ತಿರುವ ಜೊಕೋವಿಕ್‌, ಒಲಿಂಪಿಕ್ಸ್‌ ಹಾಗೂ ಯುಎಸ್‌ ಓಪನ್‌ನಲ್ಲೂ ಚಾಂಪಿಯನ್‌ ಆಗಿ ಮೂಡಿಬಂದದಿದ್ದರೆ ಗೋಲ್ಡನ್‌ ಸ್ಲಾಮ್‌ ಹಿರಿಮೆಗೆ ಪಾತ್ರರಾಗುತ್ತಿದ್ದರು. 1988ರಲ್ಲಿ ಸ್ಟೆಫಿ ಗ್ರಾಫ್ ಇಂಥದೊಂದು ಅಮೋಘ ಸಾಧನೆಗೈದಿದ್ದರು. ಪುರುಷರ ವಿಭಾಗದಲ್ಲಿ ಯಾರೂ ಈ ಎತ್ತರ ತಲುಪಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next