Advertisement

Nov.20 ರಿಂದ ಗೋವಾದಲ್ಲಿ 58ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಚಿವ ಅನುರಾಗ್ ಠಾಕೂರ್

06:29 PM Nov 06, 2023 | Shreeram Nayak |

ಪಣಜಿ: ಭಾರತದ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನ 20 ರಿಂದ 28 ರ ವರೆಗೆ ಗೋವಾದಲ್ಲಿ ನಡೆಯಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

Advertisement

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ಚಲನಚಿತ್ರೋತ್ಸವ ಗೋವಾ ಜಾಗತಿಕ ಚಲನಚಿತ್ರಗಳಿಗೆ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಠಾಕೂರ್ ಹೇಳಿದರು.

ಪ್ರತಿಷ್ಠಿತ ಸತ್ಯಜಿತ್ ರೇ ಜೀವನ್ ಗೌರವ್ ಪ್ರಶಸ್ತಿಯನ್ನು ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ವರ್ಷ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಹದಿನೈದು ಚಿತ್ರಗಳು ಸ್ಫರ್ಧೆಯಲ್ಲಿದೆ. ಗೋಲ್ಡನ್ ಪೀಕಾಕ್ ಪ್ರಶಸ್ತಿ ವಿಜೇತರಿಗೆ 40 ಲಕ್ಷ ರೂ. “ಅನಿಮೇಟೆಡ್ ಚಿತ್ರಗಳು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿವೆ ಮತ್ತು ಭಾರತದಲ್ಲಿಯೂ ಅಂತಹ ಚಲನಚಿತ್ರಗಳನ್ನು ಪ್ರಚಾರ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಠಾಕೂರ್ ಹೇಳಿದರು.

ಎಲ್ಲಾ ಐಎಫ್‍ಎಫ್‍ಐ ಕೇಂದ್ರಗಳು ಅಂಗವಿಕಲರಿಗೆ ಸೌಲಭ್ಯಗಳು ಮತ್ತು ಪ್ರವೇಶವನ್ನು ಹೊಂದಿರುತ್ತದೆ, ದೃಷ್ಟಿಹೀನರಿಗೆ ಆಡಿಯೊ ವಿವರಣೆ ಮತ್ತು ಶ್ರವಣದೋಷವುಳ್ಳವರಿಗೆ ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಮಾಡಲಾಗುತ್ತದೆ ಎಂದು ಠಾಕೂರ್ ಹೇಳಿದರು.

Advertisement

“ಕೋವಿಡ್ ವೈರಸ್ ನಂತರ, ಮನರಂಜನಾ ವಲಯದಲ್ಲಿ ಒಟಿಟಿ ಪ್ಲಾಟ್‍ಫಾರ್ಮ್‍ಗಳ ಸಂಖ್ಯೆಯು ಹೆಚ್ಚಾಗಿದೆ, ಸ್ಥಳೀಯ ವಿಷಯದ ಬೆಳವಣಿಗೆಯಂತೆ. ನಾವು ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗಳನ್ನು ಘೋಷಿಸಿದ್ದೇವೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next