Advertisement

ಮರಳು ಅಕ್ರಮ ಸಾಗಣೆ ತಡೆಗೆ ಸೂಚನೆ; ಜಿಲ್ಲಾಮಟ್ಟದ ಮರಳು ಸಮಿತಿ ಸಭೆ

06:26 PM Jan 15, 2021 | Team Udayavani |

ರಾಯಚೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಅದರಲ್ಲಿ ರಾಯಚೂರು ಒಂದಾಗಿದೆ. ಅನ ಧಿಕೃತ ಮರಳು ಸಾಗಣೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಮರಳು ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ಸಾಗಣೆ ನಿಯಂತ್ರಿಸಲು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಮರಳುಗಾರಿಕೆಗೆ ನಿಗದಿ ಪಡಿಸಿದ ರಾಜಧನ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನಧಿಕೃತ ಸಾಧಾರಣ ಮರಳು ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ 13 ಖನಿಜ ತನಿಖಾ ಠಾಣೆಗಳಿಗೆ ತನಿಖಾ ಸಿಬ್ಬಂದಿಯನ್ನು ನೇಮಿಸಬೇಕು. ಈ ಠಾಣೆಗಳಲ್ಲಿ
ಪ್ರತಿನಿತ್ಯ ಪಾಳೆ ಪ್ರಕಾರ ಮೇರೆಗೆ ಪೊಲೀಸ್‌, ಹೋಂಗಾರ್ಡ್‌ ಹಾಗೂ ಇತರೆ ಇಲಾಖೆ ಸಿಬ್ಬಂದಿಯನ್ನು ನೇಮಿಸುವಂತೆಸೂಚಿಸಿದರು.

ತನಿಖಾ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪರವಾನಗಿ ಇಲ್ಲದೇ ಸಾಗಿಸಿದವರನ್ನು ಪತ್ತೆ ಮಾಡಬೇಕು. ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6ರವರೆಗೆ ಮರಳು ಸಾಗಣೆ ನಿರ್ಬಂಧಿಸಲಾಗಿದೆ. ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಪಟ್ಟಾ ಜಮೀನಿನಲ್ಲಿ ಮಂಜೂರಾದ ಗುತ್ತಿಗೆ ಪ್ರದೇಶಗಳಿಂದ ಪರವಾನಗಿ ಪಡೆದು ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಮರಳು ತುಂಬುತ್ತಿರುವ ಬಗ್ಗೆ ಹಾಗೂ ಒಂದೇ
ಪರವಾನಗಿಯಿಂದ ಹಲವು ಬಾರಿ ಮರಳು ಸಾಗಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸಿ ಕ್ರಮ ಜರುಗಿಸಿ ಎಂದರು.

ಮರಳು ಸಾಗಾಣಿಕೆ ವಾಹನಗಳ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ ಕಬ್ಬಿಣ ಪಟ್ಟಿಯನ್ನು ಅಳವಡಿಸಿ ಅಥವಾ ವಾಹನದ ಸಾಮರ್ಥ್ಯ, ಗಾತ್ರ ಬದಲಾಯಿಸಿ ಹೆಚ್ಚು
ಪ್ರಮಾಣದ ಮರಳು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಪರವಾನಗಿಗಳನ್ನು ರದ್ದುಪಡಿಸಬೇಕು ಹಾಗೂ ಅಂತಹ  ವಾಹನಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅ ಧಿಕಾರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಇಬ್ಬರು ಸಹಾಯಕ ಆಯುಕ್ತರ ನೇತೃತ್ವದ
ತಾಲೂಕು ಮಟ್ಟದ ಮರಳು ಜಾಗೃತ ದಳವು ಅನ ಧಿಕೃತ ಮರಳು ಗಣಿಗಾರಿಕೆ, ದಾಸ್ತಾನು, ಸಾಗಣೆ ಕುರಿತು ಬರುವ ದೂರುಗಳ ಬಗ್ಗೆ ಮಾಹಿತಿ ಪಡೆಯಬೇಕು. ದೂರುಗಳು ಬಂದಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು, ಎಲ್ಲ ಚೆಕ್‌ ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸಬೇಕು ಎಂದರು.

ಕೈಗೊಂಡ ಕ್ರಮದ ಬಗ್ಗೆ ಪ್ರತಿ ತಿಂಗಳ 4ನೇ ತಾರೀಖೀನ ಒಳಗೆ ತಾಲೂಕು ಮಟ್ಟದ ಮರಳು ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಿ, ಅದರ ಪ್ರತಿಯನ್ನು ಜಿಲ್ಲಾಮಟ್ಟದ ಮರಳು ಸಮಿತಿಗೆ ಸಲ್ಲಿಸುವಂತೆ ತಿಳಿಸಿದರು. ಎಸ್‌ಪಿ ಪ್ರಕಾಶ್‌ ನಿಕ್ಕಂ, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಎಸಿ ಸಂತೋಷ್‌
ಕಾಮಗೌಡ, ರಾಜಶೇಖರ ಡಂಬಳ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಶ್ರೀಹರಿ ಬಾಬು, ಪಿಡಬ್ಲ್ಯುಡಿ ಇಲಾಖೆ ಇಇ ಚನ್ನಬಸಪ್ಪ ಮೆಕಾಲೆ, ಹಿರಿಯ ಭೂ ವಿಜ್ಞಾನಿ ವಿಶ್ವನಾಥ್‌, ತಹಶೀಲ್ದಾರ್‌ ಡಾ| ಹಂಪಣ್ಣ ಸಜ್ಜನ್‌ ಸೇರಿದಂತೆ ಮರಳು ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next