Advertisement

Notification: ನಿಮ್ಮ ಸಂದೇಶಗಳ ಮೇಲೂ ಸರ್ಕಾರ ಕಣ್ಗಾವಲು!

03:30 AM Dec 09, 2024 | Team Udayavani |

ಹೊಸದಿಲ್ಲಿ: ಫೋನ್‌ ಕರೆಗಳ ಪ್ರತಿಬಂಧಕ ರೀತಿಯಲ್ಲೇ ಇನ್ನು ಸಂದೇಶಗಳನ್ನು ಕೂಡ ತಡೆ ಹಿಡಿಯುವ ಅಧಿಕಾರವನ್ನು ಕಾನೂನು ಜಾರಿ ಮತ್ತು ಭದ್ರತಾ ಏಜೆನ್ಸಿಗಳಿಗೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗರಿಷ್ಠ 6 ತಿಂಗಳವರೆಗೆ ಕಣ್ಗಾವಲು ಮಾಡಬಹುದು. ಈ ಸಂಬಂಧ ಕೇಂದ್ರ ಸರ್ಕಾರವು ದೂರಸಂಪರ್ಕ ನಿಯಮಗಳ ಅಧಿಸೂಚನೆ ಹೊರಡಿಸಿದೆ. ಆದರೆ, ಈ ನಿಯಮ ವ್ಯಕ್ತಿಯ ಖಾಸಗಿ ಹಕ್ಕಿಗೆ ಧಕ್ಕೆ ತರಲಿದೆ ಎಂದು ಹೇಳಲಾಗುತ್ತಿದೆ.

Advertisement

ಭದ್ರತೆಯ ಕಾರಣಕ್ಕೆ ಯಾವುದೇ ವ್ಯಕ್ತಿಯ ಸಂದೇಶಗಳ ಕಣ್ಗಾವಲಿಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯ ಸಂಸ್ಥೆಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸಕ್ಷಮ ಪ್ರಾಧಿಕಾರವಾಗಿರುತ್ತಾರೆ. ಅವರಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ.

ವ್ಯಕ್ತಿಗಳ ಸಂದೇಶಗಳನ್ನು ಪ್ರತಿಬಂಧಿಸುವ ಮತ್ತು ಕಣ್ಗಾವಲು ಕೈಗೊಳ್ಳುವ ದೂರ ಸಂಪರ್ಕ ನಿಯಮಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್‌ನಲ್ಲಿ ಸರ್ಕಾರವು ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳನ್ನು ಆಹ್ವಾನಿಸಿತ್ತು. ಇದೀಗ ನಿಯಮವನ್ನು ಅಂತಿಮಗೊಳಿಸಿ, ಅಧಿಸೂಚನೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next