Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿ,ನೆಲಮಂಗಲ,ಆನೇಕಲ್,ಹೊಸಕೋಟೆ ಹಾಗೂ ಬಿಡದಿ ಗಡಿ ಪ್ರದೇಶದ ಹಾಗೂ ಇನ್ನಿತರೆ ಪ್ರದೇಶದಲ್ಲಿರುವ ಸುಮಾರು 38-40 ಸಾವಿರ ಎಕರೆ ಜಾಗವನ್ನು ಹರಾಜು ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಅಧಿಸೂಚನೆ ಹೊರಡಿಸುವ ಮೂಲಕ ಬಿಜೆಪಿ ಸರ್ಕಾರ ಬಡವರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಸರ್ಕಾರಿ ಜಮೀನು ಹರಾಜು ಮಾಡುವ ಆದೇಶವನ್ನು ರದ್ದುಗೊಳಿಸಲು ಈಗಾಗಲೇ ಸಿಎಂ,ಕಂದಾಯ ಸಚಿವರು,ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಆದರೂ ಸಹ ಸರ್ಕಾರಿ ಜಮೀನು ಹರಾಜು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಈ ಜಮೀನು ಖರೀದಿ ಮಾಡಲು ಕಂದಾಯ ಸಚಿವ ಆರ್ ಅಶೋಕ್, ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಹಾಗೂ ವಿಶ್ವನಾಥ್ ಅವರ ಬೆಂಬಲಿಗರು ಈಗಾಗಲೇ ತಯಾರಿ ನಡೆಸಿದ್ದಾರೆ ಎಂದು ದೂರಿದ ಅವರು ಸರ್ಕಾರ ಈ ಕೂಡಲೇ ಹರಾಜು ಪ್ರಕ್ರಿಯೆ ನಿಲ್ಲಿಸದಿದ್ದಲ್ಲಿ ಇದೇ ತಿಂಗಳ 30 ರೊಳಗೆ ಮುಖ್ಯ ಮಂತ್ರಿಗಳ ಮನೆಗೆ ಸಾವಿರಾರು ಬಿಎಸ್‍ಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಧ್ವನಿಯಿಲ್ಲದ ಸಂಸದರು: ರಾಜ್ಯದಲ್ಲಿ ನೆರೆ ಪರಿಹಾರ ಮತ್ತು ಜಿಎಸ್‍ಟಿ ಬಾಬತ್ತು ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆಯಲು ಮುಖ್ಯಮಂತ್ರಿಗಳು ಸಹಿತ ರಾಜ್ಯದ 26 ಸಂಸದರು ವಿಫಲರಾಗಿದ್ದಾರೆ. ಪ್ರಧಾನಮಂತ್ರಿ ಬಳಿ ರಾಜ್ಯದ ಪಾಲು ಕೇಳಲು ಸಂಸದರಿಗೆ ಧ್ವನಿ ಇಲ್ಲದಂತಾಗಿದೆ ಮುಂದಿನ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು ಮುಂಬರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಎಸ್‍ಪಿ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸುಳ್ಳು ಹೇಳುವ ಪ್ರಧಾನಮಂತ್ರಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆಯನ್ನು ಈಡೇರಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಜಗತ್ತಿನಲ್ಲಿ ಯಾರಾದರೂ ಸುಳ್ಳು ಹೇಳುವ ಪ್ರಧಾನಮಂತ್ರಿ ಯಾರಾದರೂ ಇದ್ದರೇ ಅದು ಪ್ರಧಾನಮಂತ್ರಿ ನರೇಂದ್ರಮೋದಿ ಮಾತ್ರವೆಂದು ಟೀಕಿಸಿದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ದೇಶದ ಅಭಿವೃಧ್ಧಿ ಅಸಾಧ್ಯವೆಂದ ಅವರು ಬೆಹನ್ ಮಾಯವತಿ ಅವರ ನೇತೃತ್ವದಲ್ಲಿ ಬಿಎಸ್‍ಪಿ ಪಕ್ಷ ಮುಂದಿನ ದಿನಗಳಲ್ಲಿ ಬಲಿಷ್ಠವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ,ರಾಜ್ಯ ಕಾರ್ಯದರ್ಶಿ ಪಿವಿ ನಾಗಪ್ಪ,ಮುನಿಕೃಷ್ಣಯ್ಯ,ಬಿಎಸ್‍ಪಿ ಜಿಲ್ಲಾಧ್ಯಕ್ಷ ಅಪ್ಸರ್‍ಪಾಷ,ಜಿಲ್ಲಾ ಸಂಯೋಜಕ ಡಾ.ದೇವಪ್ಪ,ನಗರಸಭಾ ಸದಸ್ಯ ಮೌಲಾ, ಶಬ್ಬೀರ್, ಜಿಲ್ಲಾ ಬಿಎಸ್‍ಪಿ ಕಾರ್ಯದರ್ಶಿ ಮೂರ್ತಿ,ಶಿಡ್ಲಘಟ್ಟ ಬಿಎಸ್‍ಪಿ ಅಧ್ಯಕ್ಷ ನರೇಶ್‍ಬಾಬು,ಬಹುಜನ ಸ್ವಯಂಸೇವಕರ ಪಡೆಯ ಉಸ್ಮಾನ್,ಬಿವಿಎಫ್ ಜಿಲ್ಲಾ ಸಂಯೋಜಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.