Advertisement

2 ವಾರದಲ್ಲಿ 15 ಸಾವಿರ ಶಿಕ್ಷಕ ಹುದ್ದೆ ಭರ್ತಿಗೆ ಅಧಿಸೂಚನೆ

11:25 PM Feb 10, 2022 | Team Udayavani |

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದು ಶಿಕ್ಷಕ ಹುದ್ದೆಗಾಗಿ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಸರಕಾರ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ.

Advertisement

15 ಸಾವಿರ ಪದವೀಧರ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು, ಫೆ.5ಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿತ್ತು. ಆಕ್ಷೇಪಣೆಗಳ ಪರಿಶೀಲನೆ ಮುಗಿದಿದ್ದು, ಈ ತಿಂಗಳ ಅಂತ್ಯಕ್ಕೆ ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ ಎಂದು ಶಿಕ್ಷಣ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ.

617 ಅಧಿಕೃತ ಮತ್ತು ಸುಮಾರು 200 ಅನಾಮಧೇಯ ಆಕ್ಷೇಪಣೆಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿವೆ.

ಇದನ್ನೂ ಓದಿ:ಉತ್ತಮ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ದೇಶದ್ರೋಹಿ ಸಂಘಟನೆಗಳ ಹುನ್ನಾರ: ಯಶ್ ಪಾಲ್ ಸುವರ್ಣ

15 ಸಾವಿರ ಹುದ್ದೆಗೆ ಒಂದು ಲಕ್ಷ ಆಕಾಂಕ್ಷಿಗಳು ರಾಜ್ಯದಲ್ಲಿ ಅಂದಾಜು 30 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 15 ಸಾವಿರ ಹುದ್ದೆ ಭರ್ತಿಗೆ ಸರಕಾರ ಮುಂದಾಗಿದೆ.

Advertisement

ಶಿಕ್ಷಕ ಹುದ್ದೆ ಭರ್ತಿ ಸಂಬಂಧ ಆಕ್ಷೇಪಣೆಗಳ ಪರಿಶೀಲನೆ ನಡೆಸಲಾಗಿದೆ. ಹುದ್ದೆ ಭರ್ತಿಗೆ ಫೆಬ್ರವರಿಯೊಳಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಚಿಂತನೆ ನಡೆಸಲಾಗಿದೆ.
– ಎಸ್‌. ಸೆಲ್ವಕುಮಾರ್‌,
ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next