ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ನಿಖರ ಮಾಹಿತಿ ಸಂಗ್ರಹಿಸಿ ಮುಂದಿನ ಯೋಜನೆಗಳ
ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಸೂಚನೆ ನೀಡಿದರು.
Advertisement
ಮಂಗಳವಾರ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬರ ಹಾಗೂ ನೀರಿನ ಕೊರತೆ ಎದುರಿಸುತ್ತಿರುವಜಿಲ್ಲೆಯಲ್ಲಿ ಕೇಂದ್ರದ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಕ್ರಿಯಾಯೋಜನೆ ರಚಿಸುವ ಜಿಲ್ಲಾಮಟ್ಟದ ತಾಂತ್ರಿಕ
ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಬಿತ್ತನೆ ಆರಂಭವಾಗಿರುವುದರಿಂದ
ಯಾವ ಬೆಳೆಗೆ ಎಷ್ಟು ನೀರಿನ ಅಗತ್ಯವಿದೆ ಎಂಬುವುದು ಅರಿತುಕೊಳ್ಳಬೇಕು. ಕೊಳವೆ ಬಾವಿ, ಕಾಲುವೆ ಸೇರಿದಂತೆ
ಮುಂತಾದ ನೀರಿನ ಮೂಲಗಳ ಮೂಲಕ ಬೆಳೆಗಳಿಗೆ ಅಗತ್ಯಾನುಸಾರ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.
ಬ್ಲಾಕ್ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಪರಿಶೀಲನೆ ನಡೆಸಿ ಮುಂದಿನ ಯೋಜನೆ
ರೂಪಿಸಲಾಗುವುದು ಎಂದು ಹೇಳಿದರು.