Advertisement
ವಿಕಾಸಸೌಧದಲ್ಲಿ ಗುರುವಾರ ಪ್ರಥಮ ಬಾರಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಬ್ಬು ಹಂಗಾಮಿನ ಬಳಿಕ ಜಮಖಂಡಿಯ ಜಮಖಂಡಿ ಶುಗರ್, ಮುಧೋಳದ ನಿರಾಣಿ ಶುಗರ್, ಜಮಖಂಡಿಯ ಸಾಯಿ ಪ್ರಿಯ ಶುಗರ್, ವಿಜಯಪುರದ ಜಮಖಂಡಿ ಶುಗರ್, ವಿಜಯಪುರದ ಭೀಮಾಶಂಕರ್ ಶುಗರ್, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್ ಕಾರ್ಖಾನೆಗಳು ಈವರೆಗೆ ಆದಾಯ ಹಂಚಿಕೆ ಮಾಹಿತಿ ನೀಡಿಲ್ಲ. ಆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
Related Articles
Advertisement
ಸಕ್ಕರೆ ಉತ್ಪಾದನೆ ಹೆಚ್ಚಳ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್‌ಎಂಇ ಮತ್ತು ಗಣಿ) ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಸಕ್ಕರೆ ಕಾರ್ಖಾನೆಗಳು 15 ದಿನದಲ್ಲಿ ರೈತರಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಶೇ.48ರಷ್ಟು ಹಣ ಪಾವತಿಯಾಗಿದೆ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಶೇ.20ರಿಂದ ಶೇ.25ರಷ್ಟು ಹಣವಷ್ಟೇ ಪಾವತಿಯಾಗಿದೆ. ಹಣ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, ಸ್ಪಂದಿಸದಿದ್ದರೆ ಸಕ್ಕರೆ ಜಫ್ತಿಗೂ ಕ್ರಮ ವಹಿಸಲಾಗುವುದು ಎಂದರು. ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಬಳಕೆ ಸುಮಾರು 25 ಲಕ್ಷ ಟನ್ ಇದ್ದರೆ, ಉತ್ಪಾದನೆ 35ರಿಂದ 40 ಲಕ್ಷ ಟನ್ ಆಗುವ ನಿರೀಕ್ಷೆ ಇದೆ. ಕಳೆದ ವರ್ಷದ ಬಾಕಿ 10 ಲಕ್ಷ ಟನ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಬ್ಬಿನ ದರ ಇಳಿಕೆಯಾಗಿರುವುದರಿಂದ ಉದ್ಯಮ ಸಂಕೀರ್ಣ ಸ್ಥಿತಿಯಲ್ಲಿದೆ ಎಂದರು.
ಹೆಚ್ಚುವರಿ 250 ರೂ.ಗೆ ಮನವಿ
ಸಭೆ ಬಳಿಕ ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್‌ಪಿ ದರದ ಮೇಲೆ 250 ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಶುಕ್ರವಾರ ಕರೆದಿರುವ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಎಸ್‌ಎಪಿ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ಹಾಗೂ ದುಬಾರಿ ದಂಡ ವಿಧಿಸುವ ಅಂಶ ಸೇರಿಸುವಂತೆ ಕೋರಲಾಗಿದೆ ಎಂದರು. ರೈತರಿಗೆ ಕಬ್ಬು ಇಳುವರಿ ಪ್ರಮಾಣ, ತೂಕದಲ್ಲಿ ವಂಚನೆಯಾಗುತ್ತಿದೆ. ಹಾಗಾಗಿ ರೈತರ ಹೊಲದಲ್ಲೇ ಕಬ್ಬಿನ ದರ ನಿಗದಿಪಡಿಸಿ ಕಟಾವು ಹಾಗೂ ಸಾಗಣೆಯನ್ನು ಕಾರ್ಖಾನೆಯೇ ಕೈಗೊಳ್ಳುವ ವ್ಯವಸ್ಥೆ ತರಬೇಕು ಎಂದು ಕೋರಲಾಯಿತು. ಈ ಬಗ್ಗೆ ಪರಿಶೀಲನೆಗೆ ಅಧ್ಯಯನ ಸಮಿತಿ ರಚಿಸುವುದಾಗಿ ಹೇಳಿದ್ದು, ತಿಂಗಳಲ್ಲಿ ವರದಿ ನೀಡಲಿದೆ. 2.60 ಕೋಟಿ ಟನ್ ಕಬ್ಬು ಅರೆಯಲಾಗಿದ್ದು, ಈವರೆಗೆ ಅರ್ಧದಷ್ಟು ಹಣವೂ ರೈತರಿಗೆ ಪಾವತಿಯಾಗಿಲ್ಲ. ಕೂಡಲೇ ಬಾಕಿ ಪಾವತಿಸುವಂತೆ ಒತ್ತಾಯಿಸಲಾಯಿತು ಎಂದರು.