Advertisement

ಆರು ಕಾರ್ಖಾನೆಗಳಿಗೆ ನೋಟಿಸ್‌: ಸಚಿವ ಮುರುಗೇಶ್‌ ನಿರಾಣಿ

06:06 PM Dec 23, 2022 | Team Udayavani |

ಸುವರ್ಣ ವಿಧಾನಸೌಧ : ಬಳ್ಳಾರಿಯ ಮುಂಡರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಆಗುವ ಸಮಸ್ಯೆ ಗಮನದಲ್ಲಿದ್ದು, ಆರು ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

Advertisement

ಹಾಗೆಯೇ ವೇಣಿವೀರಾಪುರದಲ್ಲಿ 650 ಎಕರೆ ಭೂ ಸ್ವಾಧೀನ ಮಾಡಿಕೊಂಡಿದ್ದು, ಅಲ್ಲಿಗೆ ವರ್ಗಾವಣೆಯಾಗಲು ಇಷ್ಟಪಡುವ ಕೈಗಾರಿಕೆಗಳಿಗೆ ಅವಕಾಶ ಕೊಡುವುದಾಗಿ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಪ್ರಶ್ನೋತ್ತರ ವೇಳೆ ಬಿಜೆಪಿಯ ಸೋಮಶೇಖರ ರೆಡ್ಡಿಯವರು ವಿಷಯ ಪ್ರಸ್ತಾಪಿಸಿ, ಔಷಧ ಕಂಪನಿಯೊಂದು ಪ್ರತಿ ರಾತ್ರಿ 8-9 ಗಂಟೆಗೆ ವಿಷಪೂರಿತ ಹೊಗೆ ಬಿಡುತ್ತಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆ ಭಾಗದಲ್ಲಿ ಹೊಸ ವಸತಿ ಪ್ರದೇಶಗಳು ಬರುತ್ತಿವೆ. ಹೀಗಾಗಿ ಸರ್ಕಾರ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

ಬಳಿಕ ಉತ್ತರ ನೀಡಿದ ಸಚಿವರು, ಮುಂಡರಗಿ ಗ್ರಾಮದಲ್ಲಿ ಹಳೇ ಕೈಗಾರಿಕೆ ಪ್ರಾಂಗಣವಿದೆ. ಅಲ್ಲಿನ ಮಾಲಿನ್ಯ ಹೊರಸೂಸುವ ಕಾರ್ಖಾನೆಗಳು ಇದ್ದರೆ ಅಂತವರು ಕೂಡಲೇ ಟ್ರೀಟ್‌ಮೆಂಟ್‌ ಪ್ಲಾಂಟ್‌ ಹಾಕಿಕೊಳ್ಳಬೇಕು. ಇಲ್ಲವಾದರೆ ಅವುಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next