Advertisement

ಲೋಪಗಳ ಹಿನ್ನೆಲೆ : ಸ್ಕ್ಯಾನಿಂಗ್ ಕೇಂದ್ರಗಳಿಗೆ ನೋಟಿಸ್

04:43 PM Mar 31, 2021 | Team Udayavani |

ವಿಜಯಪುರ : ಭ್ರೂಣಲಿಂಗ ಪತ್ತೆ ಪಿಸಿಪಿಎನ್ ಡಿಟಿ-1994 ಕಾಯ್ದೆ ಅನ್ವಯ ಲೋಪ ಕಂಡುಬಂದ ವಿವಿಧ ಸ್ಕ್ಯಾನಿಂಗ್ ಕೇಂದ್ರಗಳಿಗೆ ಆರೋಗ್ಯ ಇಲಾಖೆ ಮೂಲಕ  ಪಿಸಿಪಿಎನ್ ಡಿಟಿ ಜಿಲ್ಲಾ ಸಕ್ಷಮ ಪ್ರಾಧಿಕಾರಿಯಾದ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

Advertisement

ಡಾ.ಮಹಮದ್ ಅತೀಕ ಅಹಮದ್ ಮೆಡಿಸ್ಕ್ಯಾನಿಂಗ್ ಡಿಜಿಟಲ್ ಎಕ್ಸರೇ ಕೇಂದ್ರ, ಡಾ.ಸತೀಶ ಪಾಟೀಲ ಶ್ರೀ ಬನಶಂಕರಿ ಡೈಗ್ನೋಸ್ಟಿಕ್ ಸ್ಕ್ಯಾನ್ ಸೆಂಟರ್, ಡಾ.ಎಸ್.ಐ. ಕೋರಿಶಟ್ಟಿ ಸಾಸನೂರ ಹಾಸ್ಪಿಟಲ್, ಡಾ.ರಾಜಶೇಖರ ಮುಚ್ಚಂಡಿ, ದಾನೇಶ್ವರಿ ಡೈಗ್ನೋಸ್ಟಿಕ್ ಸೆಂಟರ್, ಡಾ.ರಜನಿ ಪಿ. ಜಾಧವ್ ರಜನಿ ಸೋನೋಗ್ರಾಫಿ ಮತ್ತು ಎಕ್ಸರೇ ಕೇಂದ್ರ, ಡಾ.ಮಹಾನಂದ ಬಿ. ಪಾಟೀಲ ಆದಿತ್ಯ ಜನರಲ್ ಮತ್ತು ಮೆಟರನಿಟಿ ಹಾಸ್ಪಿಟಲ್ ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್ ನೀಡಿದ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ದಾಖಲೆ ನಿರ್ವಹಣೆ, ಸೂಕ್ತ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು, ಐಇಸಿ ಬೋರ್ಡ್ ಸಣ್ಣದಾಗಿ ಅಳವಡಿಕೆ, ಸ್ಕ್ಯಾನಿಂಗ್ ರೂಮ್ ಗೆ ಹೊಂದಿಕೊಂಡು ಶೌಚಾಲಯ ಇಲ್ಲದಿರುವುದು, ಕೌನ್ಸಿಂಗ್ ರೂಮ್ ನಿರ್ವಹಣೆ ಮಾಡದಿರುವುದು,  ಶಿಫಾರಸು ಮಾಡಿದ ವೈದ್ಯರು, ರೋಗಿಗಳ ಹೆಸರಿಗೆ ಹೊಂದಾಣಿಕೆ ಆಗದಿರುವುದು, ಗರ್ಭಿಣಿಯರ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸದಿರುವುದು, ಸ್ಕ್ಯಾನಿಂಗ್ ದರಪಟ್ಟಿ ಅಳವಡಿಸದ, ರಸೀದಿ ಪುಸ್ತಕ ಇರಿಸದಂಥ ಹಲವು ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ ಎಂದು ಆಯಾ ಕೇಂದ್ರಗಳಲ್ಲಿನ ಲೋಪಗಳ ಆಧಾರದಲ್ಲಿ ನೋಟಿಸ್ ನೀಡಲಾಗಿದೆ ಎಂದು ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next