Advertisement

ಸಾರ್ವಜನಿಕ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಸೂಚನೆ

04:00 PM Jan 13, 2018 | Team Udayavani |

ಶಹಾಪುರ: ಬೇರೆ ಬೇರೆ ಗ್ರಾಮಗಳಿಂದ ಕಾರ್ಯದ ನಿಮಿತ್ತ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಸಂಬಂಧಿಸಿದ ಹಿರಿಯ ಅಧಿಕಾರಿಗಳ ಸಲಹೆ ಪಡೆದು ತಕ್ಷಣ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ನಡೆಯಬೇಕು ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಸೂಚಿಸಿದರು. ನಗರದ ಹೊಸ ತಹಶೀಲ್ದಾರ್‌ ಕಚೇರಿಗೆ ಶುಕ್ರವಾರ ಭೇಟಿ ನೀಡಿ ವಿಶೇಷವಾಗಿ ಆಹಾರ ಇಲಾಖೆ ಕಾರ್ಯ ವೈಖರಿಯನ್ನು ಪರಿಶೀಲಿಸಿದರು. 

Advertisement

ಪಡಿತರ ಕಾರ್ಡಿನ ಬದಲಾವಣೆ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಮತ್ತು ತಕ್ಷಣವೇ ಸ್ಪಂದಿಸಿ ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪಡಿತರ ಕಾರ್ಡ್‌ ನೋಂದಣಿಯಾಗಬೇಕು. ಇಗ 65%
ಪ್ರತಿಶತ ಗುರಿ ತಲುಪಿದ್ದು, ಇನ್ನು 10% ಅವಕಾಶಗಳಿದ್ದು ಆಹಾರ ಸುರಕ್ಷತೆ ಕಾಯ್ದೆಯ ಅನ್ವಯದಂತೆ ಸರ್ಕಾರದ
ಯೋಜನೆ ಸಾರ್ಥಕವಾಗಲು ಅಗತ್ಯ ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರಿಗೆ ತಿಳಿಸಿದರು.

ಪಹಣಿ ಪಡೆಯಲು ಮುಕ್ತ ಅವಕಾಶ: ಪಹಣಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ತಹಶೀಲ್ದಾರ್‌ ಕಚೇರಿ ಸೇರಿದಂತೆ ಗಣಕೀಕೃತ ಕೇಂದ್ರಗಳಲ್ಲಿ ಪಹಣಿ ಲಭ್ಯವಾಗಲಿದ್ದು, ಕಳೆದ ಮೂರು ದಿನಗಳಿಂದ ವ್ಯವಸ್ಥೆಗೊಳಿಸಲಾಗಿದೆ. ಇನ್ನು ಮುಂದೆ ಪಹಣಿಗಾಗಿ ಕಾಯಬೇಕಿಲ್ಲವೆಂದು ಜನರಿಗೆ ತಿಳಿಸಿದರು. 

ಸಕಾಲ ಸೇವೆ ಸಮರ್ಪಕವಾಗಿ ನಿರ್ವಹಿಸಿ: ತಹಶೀಲ್ದಾರ್‌ ಕಚೇರಿಯಲ್ಲಿರುವ ಸಕಾಲ ಸೇವೆಗೆ ಇರುವ ಕೇಂದ್ರದ ಬಗ್ಗೆ
ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಗಳು ಸೇವೆಯ ಸೌಲಭ್ಯ ಎಲ್ಲರಿಗೂ ದೊರಕುವಂತಾಗಬೇಕು. ಸೇವಾ ಕೇಂದ್ರ
ಸೌಲಭ್ಯಯುತವಾಗಿರಬೇಕು. ಈ ಕುರಿತಂತೆ ಸಂಬಂಧಿಸಿದವರು ಗಮನ ಹರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಳೇ ತಹಶೀಲ್ದಾರ್‌ ಕಚೇರಿಯ ಉಪನೋಂದಣಾಧಿಕಾರಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.

Advertisement

ಸಾರ್ವಜನಿಕರೊಂದಿಗೆ ಚರ್ಚಿಸುತ್ತ ಹಲವಾರು ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವಿನಾಶ ಮೆನನ್‌, ಸಹಾಯಕ ಆಯುಕ್ತ ಡಾ| ಜಗದೀಶ
ನಾಯಕ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next