ಸುರಪುರ: 2020-21 ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಕಾರ್ಯ ಡಿ. 10ರಿಂದ ಆರಂಭಿಸಿದ್ದು,ಮುಕ್ತಾಯ ಹಂತಕ್ಕೆ ಬರಲಾಗಿದೆ.ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ವಿವರ ದಾಖಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಹೇಳಿದರು.
ಸಮೀಪದ ಶೆಳ್ಳಗಿ ಗ್ರಾಮದಲ್ಲಿ ಜಮೀನುಗಳಿಗೆ ಭೇಟಿ ನೀಡಿ ಹಿಂಗಾರು ಬೆಳೆಗಳ ಮಾಹಿತಿ ದಾಖಲಿಸಿಕೊಂಡು ಮಾತನಾಡಿದ ಅವರು, ತಾಲೂಕಿನಾದ್ಯಂತ ಬೆಳೆಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.ಸರಕಾರದ ಆದೇಶದ ಅನುಸಾರ ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿರೈತರು ಸ್ವತಃ ತಾವೇ ತಮ್ಮ ಜಮೀನಿನವಿವರವನ್ನು ದಾಖಲಿಸಿಕೊಳ್ಳಬಹುದು ಎಂದರು.
ಕೃಷಿ ಅಧಿಕಾರಿಗಳೇ ಬಂದುದಾಖಲಿಸಿಕೊಳ್ಳಬೇಕು ಎಂಬ ನಿಯಮವೇನು ಇಲ್ಲ. ರೈತರೇ ತಮ್ಮ ಹೊಲದಲ್ಲಿನ ಮಾಹಿತಿಯನ್ನು ಹಿಂಗಾರು ಬೆಳೆ ಸಮೀಕ್ಷೆ 2020-21ಎಂಬ ಹೆಸರಿನ ಮೊಬೈಲ್‌ಆ್ಯಪ್ ಅನ್ನು ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡು ತುಂಬಬಹುದು. ಆಧಾರ್ ಕಾರ್ಡ್ ನ್ನು ಸ್ಕ್ಯಾನ್ ಮಾಡಿಕೊಳ್ಳಬೇಕು. ತಮ್ಮ ಮೊಬೈಲ್ ಸಂಖ್ಯೆ, ಒಟಿಪಿಯನ್ನು ನಮೂದಿಸಿಕೊಂಡು ಸಕ್ರಿಯಗೊಳಿಸಿಕೊಂಡು ನಿಗದಿತ ಅವಧಿಯ ಒಳಗಾಗಿ ಬೆಳೆ ವಿವರ ದಾಖಲಿಸಬೇಕು ಎಂದು ತಿಳಿಸಿದರು. ಕೃಷಿ ಅಧಿಕಾರಿ ಭೀಮರಾಯ, ಗ್ರಾಮದ ರೈತರು ಇದ್ದರು.
ಸರ್ಕಾರದ ಯೋಜನೆ ಸದ್ಬಳಕೆಯಾಗಲಿ :
ಸೈದಾಪುರ: ಸರಕಾರದಿಂದ ದೊರೆಯುವ ಯೋಜನೆಗಳ ಸರಿಯಾದ ಸದುಪಯೋಗ ನಮ್ಮದಾಗಬೇಕು.ಇದಕ್ಕಾಗಿ ಇಲಾಖೆಯಿಂದ ಕಾಲ ಕಾಲಕ್ಕೆನೀಡಲಾದ ಆದೇಶಗಳನ್ನು ಸಂಸ್ಥೆಯವರುಸರಿಯಾದ ರೀತಿಯಲ್ಲಿ ಪಾಲಿಸಬೇಕು ಎಂದು ಹಿಂದುಳಿದ ವಲಯ ವರ್ಗಗಳಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಯಲಯದ ಮೇಲ್ವಿಚಾರಕ ಅನಂತಕುಮಾರ ಹೇಳಿದರು.
ಪಟ್ಟಣದ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶುಲ್ಕ ವಿನಾಯಿತಿ ಯೋಜನೆ ಅನುಷ್ಠಾನ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಿವಿಧ ಯೋಜನೆಗಳಿವೆ.ಅವುಗಳ ಸರಿಯಾದ ಸದುಪಯೋಗ ವಾಗಬೇಕಾದರೆ ಸಂಸ್ಥೆಯ ಮುಖ್ಯಸ್ಥರುಇಲಾಖೆಯ ಮಾರ್ಗದರ್ಶನ ಹಾಗೂ ಸಲಹೆಯೊಂದಿಗೆ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.