ಬೆಂಗಳೂರು: ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದವರಿಂದ ಪಾಲಿಕೆಯ ಸೇವೆಯ ಬಗ್ಗೆ (ಫೀಡ್‌ಬ್ಯಾಕ್) ಸಂಗ್ರಹಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಸೋಂಕು ತಡೆ ಸಂಬಂಧ ಪೂರ್ವ ವಲಯ ಕೋವಿಡ್ ಕಮಾಂಡ್ ಸೆಂಟರ್ (ಅಕ್ಕಮಹಾದೇವಿ ಸಭಾಂಗಣ)ಗೆ ಆಯುಕ್ತರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಅಧಿಕಾರಿಗಳ ಜತೆ ಮಾತನಾಡಿದ ಅವರು, ನಗರದಲ್ಲಿ ಸೋಂಕು ದೃಢಪಟ್ಟ ಶೇ.55 ಜನ ಹೋಂ ಐಸೋಲೇಷನ್‌ಗೆ ಒಲವು ತೋರಿಸುತ್ತಿದ್ದಾರೆ. ಇವರಿಗೆ ಪಾಲಿಕೆಯ ಕಮಾಂಡ್ ಸೆಂಟರ್ ಹಾಗೂ ಆರೋಗ್ಯಾಧಿಕಾರಿಗಳು ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಜತೆಗೆ ವಿಟಮಿನ್ ಮಾತ್ರೆಗಳು ನೀಡಲಾಗುತ್ತಿದ್ದು, ಸೋಂಕಿತರ ಆರೋಗ್ಯ ಕಾಳಜಿ ವಹಿಸಲಾಗುತ್ತಿದೆ. ಅಲ್ಲದೆ, ತುರ್ತು ವೇಳೆಯಲ್ಲಿ ಸ್ಪಂದಿಸಲಾಗುತ್ತಿದೆ. ಈ ವ್ಯವಸ್ಥೆ ಸಾರ್ವಜನಿಕರಿಗೆ ತೃಪ್ತಿ ನೀಡಿದೆಯೇ ಅಥವಾ ಬದಲಾವಣೆ ಮಾಡಿಕೊಳ್ಳಬೇಕೆ ಎಂಬುದನ್ನು ತಿಳಿಸಬೇಕಿದೆ ಹೀಗಾಗಿ, ಗೃಹ ಆರೈಕೆಯಲ್ಲಿರುವವರ ಅಭಿಪ್ರಾಯ ತಿಳಿಯುಲು ಒಂದು ನಿರ್ದಿಷ್ಟ ಪ್ರಶ್ನೆ ಮಾದರಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಮಾದರಿ ಬಗ್ಗೆ ಮಾಹಿತಿ ಪಡೆದರು. ಮಾಹಿತಿಗೆ ಇಂಡೆಕ್ಸ್ ತಂತ್ರಾಂಶ: ಹೋಂ ಐಸೋಲೇಷನ್‌ನ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಮನೆಯಲ್ಲಿ ಚಿಕಿತ್ಸೆ ಪಡೆಯುವವರರ ಬಗ್ಗೆ ಇಂಡೆಕ್ಸ್ ಎಂಬ ತಂತ್ರಾಂಶದಲ್ಲಿ ಮಾಹಿತಿಸಂಗ್ರಹಿಸಲಿದ್ದು, ಅದಕ್ಕಾಗಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಸಿಬ್ಬಂದಿ ನಿಯೋಜಿಸಲಾಗಿದೆ. ಇವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜತೆ ದೂರವಾಣಿಮೂಲಕ ಸಂಪರ್ಕಿಸಿ,ಮನೆ ವಾತಾವರಣ ಸೇರಿದಂತೆ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡುವರು ಎಂದು ತಿಳಿಸಿದರು.
ಈ ವೇಳೆಪೂರ್ವ ವಲಯ ಜಂಟಿ ಆಯುಕ್ತೆಕೆ.ಆರ್. ಪಲ್ಲವಿ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ತಪಾಸಣೆ: ದೊಮ್ಮಲೂರು ವಾರ್ಡ್‌ನ ನಗರ ಪ್ರಾಥಮಿಕ್ಕೆ ಆರೋಗ್ಯ ಕೇಂದ್ರಕ್ಕೆ ಆಯುಕ್ತರು ಭೇಟಿ ನೀಡಿ, ನಿತ್ಯಕೊರೊನಾ ಪರೀಕ್ಷೆ ಮತ್ತು ನಿರ್ವಹಣೆಕುರಿತು ಪರಿಶೀಲನೆ ನಡೆಸಿದರು. ಪ್ರತಿನಿತ್ಯ 30- 40 ಜನರ ಸೋಂಕು ಪರೀಕ್ಷೆ ನಡೆಯುತ್ತಿದ್ದು, ರಜಾ ದಿನದಲ್ಲಿ 20- 25 ಜನ ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಪರೀಕ್ಷೆಗಾಗಿ ಆಗಮಿಸಿದ್ದ ನಾಗರಿಕರ ಜತೆ ಆಯುಕ್ತರು ಮಾತುಕತೆ ನಡೆಸಿದರು.
ಹೋಂಐಸೋಲೇಷನ್ ನಲ್ಲಿಇರುವವರಿಂದ ಚಿಕಿತ್ಸೆ ಕುರಿತು ಪಾಲಿಕೆ ಸೇವೆಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಆಯುಕ್ತರು ಸೂಚಿಸಿದ್ದಾರೆ. ಪಾಲಿಕೆಯಕಾರ್ಯವೈಖರಿ ತೃಪ್ತಿದಾಯಕವಾಗಿದೆಯೇ ಅಥವಾ ಸರಿಪಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಅಗತ್ಯವಾಗಿದೆ.ಈ ಕುರಿತು ಶೀಘ್ರ ಅಭಿಪ್ರಾಯ ಸಂಗ್ರಹ ಪ್ರಶ್ನೆ ಮಾದರಿ ಸಿದ್ಧಪಡಿಸಿಕೊಳ್ಳಲಾಗುವುದು.
-ಕೆ.ಆರ್.ಪಲ್ಲವಿ, ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತೆ