Advertisement
ಜನಾರ್ದನರೆಡ್ಡಿ ಬಹಿರಂಗವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆಯಾಯಿತು. ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರ ಪುತ್ರನ ಕುರಿತ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿ ಕ್ಷಮೆ ಕೇಳುವ ಸ್ಥಿತಿ ನಿರ್ಮಾಣವಾಯಿತು. ಈಗ ಅವರ ವಿರುದ್ಧ ಮತ್ತೂಂದು ಗಂಭೀರ ಆರೋಪ ಕೇಳಿ ಬಂದಿದೆ. ಪಕ್ಷದ ನಾಯಕರು ಅವರ ಪರ ನಿಂತರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದೆಂದು ರಾಜ್ಯದ ನಾಯಕರೊಬ್ಬರು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ನಾಯಕರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾರೂ ಸದ್ಯಕ್ಕೆ ಜನಾರ್ದನರೆಡ್ಡಿ ಪರ ಮಾತನಾಡುವುದು ಬೇಡ. ಪ್ರಕರಣ ತೀವ್ರತೆ ಹಾಗೂ ಮುಂದಿನ ವಿದ್ಯಮಾನ ನೋಡಿ ನಂತರ ಪ್ರತಿಕ್ರಿಯೆ ನೀಡಿ. ತಕ್ಷಣಕ್ಕೆ ಯಾರೂ ಬಹಿರಂಗವಾಗಿ ಏನೂ ಮಾತನಾಡಬಾರದು ಎಂದು ನಿರ್ದೇಶನನೀಡಿದ್ದಾರೆ ಎಂದು ಹೇಳಲಾಗಿದೆ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ