Advertisement

ಸಾರಿಗ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ವಸತಿಗೃಹ ಹಂಚಿಕೆ ರದ್ದುಗೊಳಿಸುವುದಾಗಿ ನೋಟಿಸ್!

12:30 PM Apr 08, 2021 | Team Udayavani |

ಹುಬ್ಬಳ್ಳಿ: ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ನೋಟಿಸ್ ನೀಡಲು‌ ಅಧಿಕಾರಿಗಳು ಮುಂದಾಗಿದ್ದಾರೆ. ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ವಸತಿಗೃಹದಲ್ಲಿ ತಂಗಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ವಸತಿ ಗೃಹ ಹಂಚಿಕೆ ರದ್ದುಗೊಳಿಸುವುದಾಗಿ ತಿಳುವಳಿಕೆ ನೋಟಿಸ್ ನೀಡಲಾಗುತ್ತಿದೆ.

Advertisement

ಸಾರಿಗೆ ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಈ ಕ್ರಮಕ್ಕೆ ಮುಂದಾಗಿದ್ದಾರೆ. ನಗರ ಸಾರಿಗೆ ವಿಭಾಗದ ವತಿಯಿಂದ ನೋಟಿಸ್ ಹಂಚಿಕೆ ಮಾಡಲಾಗುತ್ತಿದ್ದು, ಮನೆಯಲ್ಲಿ ಸಿಬ್ಬಂದಿ ಇರದಿದ್ದರೂ ಅವರ ಕುಟುಂಬದ ಸದಸ್ಯರಿಗೆ ನೋಟಿಸ್ ನೀಡಲಾಗುತ್ತಿದೆ. ಇನ್ನೂ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಮನೆ ಬಾಗಿಲಿಗೆ ಅಂಟಿಸಲಾಗುತ್ತಿದೆ. ಈ ಪ್ರತಿಯನ್ನು ಸಿಬ್ಬಂದಿಯ ವಾಟ್ಸಾ ಆ್ಯಪ್ ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆಯಲ್ಲಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬರುವಂತೆ ಮಾಡಲು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮೇಲಿನ ಅಧಿಕಾರಿಗಳ ಸೂಚನೆ ಮೇರೆಗೆ ನೋಟಿಸ್ ನೀಡಲಾಗಿದೆ ಎಂಬುವುದು ಅಧಿಕಾರಿಗಳ ಮಾತಾಗಿದೆ.

ಅಧಿಕಾರಿಗಳ ಈಕ್ರಮಕ್ಕೆ ನೌಕರರ ಕುಟುಂದವರು ತೀವ್ರ ವಿರೋಧ ವ್ಯಕ್ತವಾಗಿದೆ. ಸಮಸ್ಯೆ ಬಗೆಹರಿಸುವ ಬದಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡಿಯುವ ಯಜಮಾನ ಮನೆಯಲ್ಲಿ ಇಲ್ಲ. ಈಗ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ವೇತನ ಕಡಿಮೆ ಇದೆ ಎಂದು ಕೇಳುವುದು ತಪ್ಪಾ ಎಂದು ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next