Advertisement
ತೋಟಗಾರಿಕೆ ಇಲಾಖೆಯಲ್ಲಿ ಎಸ್‌ಸಿಪಿ – ಟಿಎಸ್‌ಪಿ ಯೋಜನೆ, ಕೇಂದ್ರ ವಲಯ, ರಾಜ್ಯ ವಲಯ ಹಾಗೂ ಜಿಲ್ಲಾ ವಲಯದ ಯೋಜನೆಗಳು 15 ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಶಿಸ್ತು ಮೂಡಿಸಲು ಕಠಿಣ ಕ್ರಮಕ್ಕೆ ಚಿಂತಿಸಿದ್ದಾರೆ.
ನಿಗದಿಪಡಿಸಲಾಗಿದೆ. ಅಂದರೆ ಪ್ರಸಕ್ತ ಆರ್ಥಿಕ ವರ್ಷದ ನಾಲ್ಕು ತ್ತೈಮಾಸಿಕದಲ್ಲಿ ತಲಾ ಶೇ.25 ರಷ್ಟು ಅನುದಾನವನ್ನು ಕಡ್ಡಾಯವಾಗಿ ಬಳಸಿದರೆ ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಲಿದ್ದು, ಬೆಳೆಗಾರರಿಗೆ ಅನುಕೂಲವಾಗಲಿದೆ ಎಂಬುದು
ಇಲಾಖೆ ಆಶಯ.
Related Articles
Advertisement
ಕಳಪೆ ಸಾಧನೆ: ರಾಜ್ಯದ 14 ಜಿಲ್ಲೆಗಳು ಮೊದಲ ತ್ತೈಮಾಸಿಕದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಅನುದಾನ ಬಳಕೆಯಲ್ಲಿ ಕಳಪೆ ಸಾಧನೆ ತೋರಿವೆ. ಧಾರವಾಡದಲ್ಲಿ ಶೇ.0.47ರಷ್ಟು ಅನುದಾನ ಬಳಕೆಯಾಗಿದ್ದು, ಅತಿ ಕಡಿಮೆ ಅನುದಾನ ಬಳಸಿದ ಜಿಲ್ಲೆ ಎನಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.1.66ರಷ್ಟು ಅನುದಾನವಷ್ಟೇ ಬಳಕೆಯಾಗಿದೆ. ಶೇ.22.02ರಷ್ಟು ಅನುದಾನ ಬಳಸಿದ ಕಲಬುರಗಿ ಜಿಲ್ಲೆಯು ನಿಗದಿತ ಅನುದಾನ ಬಳಸುವಲ್ಲಿ ವಿಫಲವಾಗಿದೆ.
15 ಉಪ ನಿರ್ದೇಶಕರಿಗೆ ನೋಟಿಸ್: ಮೊದಲ ತ್ತೈಮಾಸಿಕದಲ್ಲಿ ಎಸ್‌ಸಿಪಿಟಿಎಸ್‌ಪಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸದ 14 ಜಿಲ್ಲೆಗಳ ಉಪನಿರ್ದೇಶಕರಿಗೆ ತೋಟಗಾರಿಕೆ ಇಲಾಖೆ ಆಯುಕ್ತರು ನೋಟಿಸ್ ನೀಡಿದ್ದಾರೆ. ಹಾಗೆಯೇ ರಾಜ್ಯ, ಕೇಂದ್ರ ಹಾಗೂ ಜಿಲ್ಲಾವಲಯ ಯೋಜನೆಗಳ ಅನುಷ್ಠಾನದಲ್ಲೂ ನಿರೀಕ್ಷಿತ ಸಾಧನೆ ತೋರದ ಮೂರು ಜಿಲ್ಲೆಗಳ ಉಪ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಈ ಪೈಕಿ ಕೆಲವರು ಸಮ ಜಾಯಿಷಿ ನೀಡಿದ್ದಾರೆ.ಇವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ತ್ತೈಮಾಸಿಕದಲ್ಲಿ ಶೇ.25ರಷ್ಟು ಅನುದಾನ ಬಳಸುವಂತೆ ಗುರಿ ನೀಡಿದ್ದರೂ ಸುಮಾರು 15 ಜಿಲ್ಲೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ. ಈ ಬಾರಿ ಮುಂಗಾರು ಆರಂಭದಲ್ಲಿ ಎರಡೂವರೆ ತಿಂಗಳು ಮಳೆ ಬಾರದಿದ್ದುದ್ದು, ಬೆಳೆ ವಿಮೆ,
ಬೆಳೆ ಕಟಾವು ಪ್ರಕ್ರಿಯೆ, ಇದೇ ಅವಧಿಯಲ್ಲಿ ಬಡ್ತಿ, ವರ್ಗಾವಣೆ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿರಬಹುದು.
ಆದರೆ ಉಳಿದ ಜಿಲ್ಲೆಗಳಲ್ಲಿ ಉತ್ತಮ ಪ್ರಗತಿಯಾಗಿರುವ ಹಿನ್ನೆಲೆಯಲ್ಲಿ 15 ಜಿಲ್ಲೆಗಳ ಉಪ ನಿರ್ದೇಶಕರಿಗೆ ನೋಟಿಸ್
ನೀಡಲಾಗಿದೆ. ಜತೆಗೆ ಅತಿ ಕಡಿಮೆ ಪ್ರಗತಿ ಸಾಧಿಸಿದವರಿಗೆ ಅಲ್ಪ ಪ್ರಮಾಣದ ದಂಡವಿಧಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ.
– ಪ್ರಭಾಷ್‌ಚಂದ್ರ ರೇ ತೋಟಗಾರಿಕೆ ಇಲಾಖೆ ಆಯುಕ್ತ – ಎಂ.ಕೀರ್ತಿಪ್ರಸಾದ್