Advertisement

ಅತಿವೃಷ್ಟಿ ಹಾನಿ ವೀಕ್ಷಿಸಿದ ಶಾಸಕ ಮತ್ತಿಮಡು-ಸಮೀಕ್ಷೆಗೆ ಸೂಚನೆ

04:10 PM Sep 30, 2020 | Suhan S |

ಕಲಬುರಗಿ: ಸತತ ಮಳೆಯಿಂದ ಹಾನಿಯಾಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಕೋಟ್ಯಂತರ ಮೊತ್ತದ ಬೆಳೆ ಹಾನಿಯನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದರು.

Advertisement

ಗ್ರಾಮೀಣ ಕ್ಷೇತ್ರದ ಸರಡಗಿ, ಬೋಳೆವಾಡ, ವೆಂಕಟಬೆನೂರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಮಸ್ಯೆಗೆ ಒಳಗಾದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಹಿಂದೆಂದು ಕಂಡರೀಯದಷ್ಟು ಬೆಳೆ ಹಾನಿಯಾಗಿದೆ. ಹೀಗಾಗಿ ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಬಹು ಮುಖ್ಯವಾಗಿ ಹಾನಿಗೊಳಗಾದ ಒಬ್ಬ ರೈತನೂ ಪರಿಹಾರ ಸಿಗದೇ ಉಳಿಯಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಹಾಗೂ ಹಾನಿಯಾಗಿರುವ ಸೇತುವೆಗಳು ಜತೆಗೆ ಇತರ ಸಾರ್ವಜನಿಕ ಹಾನಿಯನ್ನು ಸಹ ವರದಿ ರೂಪಿಸಿ ಸಂಬಂಧಪಟ್ಟ ಇಲಾಖಾ ಮುಖಾಂತರ ಸಲ್ಲಿಸಬೇಕು ಎಂದರು. ಕಲಬುರಗಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಮುಖಂಡರಾದ ವಿನೋದ್‌ ಪಾಟೀಲ ಸರಡಗಿ, ಪ್ರಭು ರಾವೂರ, ಸಂತೋಷ ಆಡೆ ದಾಭಾ, ಅರವಿಂದ ಚವ್ಹಾಣ್‌ ಶಾಂತಕುಮಾರ ಪಾಟೀಲ ನಂದೂರ, ಜೀತು ರಾಥೋಡ್‌, ಜಗದೀಶ್‌ ಪಾಟೀಲ ಸಣ್ಣೂರ, ವಿಶ್ವನಾಥ್‌ ಪಾಟೀಲ ವೆಂಕಟಬೇನೂರ, ವಿಶ್ವನಾಥ್‌ ಗೋಧಿ,  ಶಿವಮೂರ್ತಿ ಸಣ್ಣೂರ, ವೀರೇಶ ಉಪ್ಪಳಾಂವ, ವೀರು ಸ್ವಾಮಿ ನರೋಣ, ಸಾಬಯ್ಯ ಗುತ್ತೇದಾರ, ವಿಜಯಕುಮಾರ್‌ ಗೋಳಾ ಸಂತೋಷ ಪಾಟೀಲ ಹರಸೂರ, ಶರಣಗೌಡ ಪಾಟೀಲ ಹರಕಂಚಿ, ಸತೀಶ್‌ ಸೂರಡೆ, ಮುಗಳಿ ರಾಜು ವಾಲಿ ನರೋಣ ಸೇರಿದಂತೆ ಮುಂತಾದವರಿದ್ದರು.

……………………………………………………………………………………………………………………………………………………………….

ವಿದ್ಯುತ್‌ ಸಮಸ್ಯೆ ಸರಿಪಡಿಸಲು ಒತ್ತಾಯ :

Advertisement

ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ಹಳ್ಳಿಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಜೆಸ್ಕಾಂ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಇಲಾಖೆ ಅಧಿ ಕಾರಿಗಳ ಬೇಜವಾªರಿತನ ಕಾರಣವಾಗಿದೆ ಎಂದು ತಾಲೂಕು ಭೀಮ ಆರ್ಮಿ ಅಧ್ಯಕ್ಷ ಅಮರನಾಥ ಲೊಡನೋರ ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡೀ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆತನಕ ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಸಾಕಷ್ಟು ಜನರು ಜೆಸ್ಕಾಂಗೆ ದೂರವಾಣಿ ಕರೆ ಮಾಡಿ ಕೇಳಿದರೆ ಮೇಲಿಂದ ಲೈನ್‌ ಫಾಲ್ಟ್ ಆಗಿದೆ ಎಂದು ಹೇಳುತ್ತಾರೆ. ಜನರ ತಾಳ್ಳೆ ಪರೀಕ್ಷಿಸಬೇಡಿ. ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಅಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next