Advertisement

ಪ್ರಯಾಣಿಕರು-ಪ್ರಥಮ ಸಂಪರ್ಕಿತರಿಗೆ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಸೂಚನೆ

02:07 PM Jul 18, 2020 | Suhan S |

ವಿಜಯಪುರ: ಜಿಲ್ಲೆಯ ಸಾರ್ವಜನಿಕ ಆರೋಗ್ಯ ಮತ್ತು ಕ್ಷೇಮದ ಹಿತದೃಷ್ಟಿಯಿಂದ ಪ್ರಯಾಣಿಕರು, ಕೋವಿಡ್‌-19 ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಮ್‌ ಕ್ವಾರಂಟೈನ್‌ಗೆ ಒಳಪಡಬೇಕು. ನೀಡಲಾದ ಅಗತ್ಯ ಸೂಚನೆ ಅನುಸರಿಸದಿದ್ದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ -1897 ಹಾಗೂ ಐಪಿಸಿ ಕಲಂ ಅಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿ ಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

Advertisement

ಪ್ರಯಾಣಿಕರು, ಕೋವಿಡ್‌ ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ನೀಡಿದ ಮಾರ್ಗಸೂಚಿಗಳು ಹಾಗೂ ಪ್ರಮಾಣೀಕೃತ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣದಿಂದ ದುರ್ಬಲರು ಹಾಗೂ ಜನ ಸಮುದಾಯಕ್ಕೆ ಸೋಂಕು ಹರಡಿ ಸಮಾಜಕ್ಕೆ ಸುಧಾರಿಸಲಾಗದ ಹಾನಿ ಉಂಟಾಗುವ ಸಂಭವಿರುತ್ತದೆ ಎಂದರು.

15 ದಿನ ಮದುವೆ ನಿಷೇಧ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮ ಪಾಲನೆಯಾಗದೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮವಾಗಿ ಮುಂದಿನ 15 ದಿನಗಳ ಕಾಲ ಮದುವೆ ಆಯೋಜಿಸುವುದನ್ನು ನಿಷೇಧಿಸಿ ಡಿಸಿ ಆದೇಶ ನೀಡಿದ್ದಾರೆ. ರಜಿಸ್ಟರ್‌ ಮದುವೆ ಹೊರತು ಪಡಿಸಿ ಹೆಚ್ಚು ಜನ ಸೇರುವಂತಹ ಮದುವೆಗಳನ್ನು ನಿಷೇಧಿ  ಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next