Advertisement

ಶಾರುಖ್‌ ಅನಂತರ ಬಚ್ಚನ್‌ ಕುಟುಂಬಕ್ಕೂ ನೋಟಿಸ್‌

08:20 AM Jul 23, 2017 | Team Udayavani |

ಮುಂಬಯಿ: ವಿದೇಶ ವಿನಿಮಯಕ್ಕೆ ಸಂಬಂಧಿಸಿದಂತೆ ನಟ ಶಾರುಖ್‌ ಖಾನ್‌ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ಸಮನ್ಸ್‌ ಪಡೆಯುವುದಕ್ಕೆ ತಿಂಗಳ ಮೊದಲೇ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕುಟುಂಬದ ಎಲ್ಲ ಸದಸ್ಯರು ಹಾಗೂ ಅಜಯ್‌ ದೇವ್‌ಗನ್‌ ಅವರಿಂದಲೂ ವಿದೇಶ ವಿನಿಮಯದ ಮಾಹಿತಿ ಕೋರಿ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದ್ದ ವಿಷಯ ಬಹಿರಂಗಗೊಂಡಿದೆ.

Advertisement

ಬಿಗ್‌-ಬಿ ಅಮಿತಾಭ್‌ ಬಚ್ಚನ್‌, ಪತ್ನಿ ಜಯಾ ಬಚ್ಚನ್‌, ಪುತ್ರ ಅಭಿಷೇಕ್‌ ಬಚ್ಚನ್‌ ಹಾಗೂ ಸೊಸೆ ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ನೋಟಿಸ್‌ ನೀಡಿರುವ ಜಾರಿ ನಿರ್ದೇಶ ನಾಲಯ, ಕಳೆದ 13 ವರ್ಷಗಳಲ್ಲಿ ಅವರು ದೇಶದ ಗಡಿಯಾಚೆಗೆ ನಡೆಸಿದ ಹಣಕಾಸು ವ್ಯವಹಾರ, ಹೂಡಿಕೆಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದೆ. ಆರ್‌ಬಿಐ 2004ರಲ್ಲಿ ಲಿಬರಲೈಸ್ಡ್ ರೆಮಿಟೆನ್ಸ್‌  ಸ್ಕೀಮ್‌ (ಎಲ್‌ಆರ್‌ಎಸ್‌) ಜಾರಿಗೊಳಿಸಿದ ಅನಂತರದ ವ್ಯವಹಾರಗಳ ಮಾಹಿತಿ ನೀಡಿಲ್ಲ. ಹೀಗಾಗಿ ಬಚ್ಚನ್‌ ಕುಟುಂಬವನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next