Advertisement

3 ಸಾ. ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಗೆ ಸೂಚನೆ

10:42 AM Jul 09, 2020 | mahesh |

ಕುಂದಾಪುರ: ಕುಡಿಯುವ ನೀರು ಹಾಗೂ ಬೀದಿ ದೀಪದ ಬಾಬ್ತು ರಾಜ್ಯದ ಎಸ್ಕಾಂಗಳಿಗೆ ಪಾವತಿಗೆ ಬಾಕಿಯಾದ 3,139.44 ಕೋಟಿ ರೂ.ಗಳನ್ನು ಒಂದೇ ದಿನದಲ್ಲಿ ಪಾವತಿಸುವಂತೆ ಸರಕಾರ ಬುಧವಾರ ಆದೇಶ ಮಾಡಿದೆ. ಇಡೀ ರಾಜ್ಯದಲ್ಲಿ ಉಡುಪಿ ಜಿಲ್ಲೆ ಅತ್ಯಂತ ಕನಿಷ್ಠ ಬಾಕಿ ಉಳಿಸಿಕೊಂಡ ಜಿಲ್ಲೆ (0.65 ಕೋ.ರೂ.)ಎಂದು ಗುರುತಿಸಿಕೊಂಡಿದೆ. ಅನಂತರದ ಸ್ಥಾನ ಉತ್ತರ ಕನ್ನಡಕ್ಕೆ (1.01ಕೋ.ರೂ.). ಅತಿ ಹೆಚ್ಚು ಬಾಕಿ ಉಳಿಸಿದ್ದು ಕೋಲಾರ (349.5 ಕೋ.ರೂ.).

Advertisement

ಕಟ್ಟಲೇ ಇಲ್ಲ
ಈ ವರ್ಷದ ಜನವರಿಯಿಂದ ಸೂಚನೆ ನೀಡಿದ್ದರೂ ಗ್ರಾ. ಪಂ.ಗಳು ಬಿಲ್‌ ಪಾವತಿಸಿಲ್ಲ. ಪಂಚತಂತ್ರ ತಂತ್ರಾಂಶದಲ್ಲೂ ಸಮರ್ಪಕ ಮಾಹಿತಿ ನೀಡಿಲ್ಲ. 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಶೇ.25ನ್ನು ಎಸ್ಕಾಂ ಬಾಕಿ ಬಿಲ್‌ಪಾವತಿಗೆ ಮೀಸಲಿಟ್ಟು ಆದೇಶಿಸಲಾಗಿತ್ತು. ಇದೀಗ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯ ಮೊದಲ ಕಂತನ್ನು ಕೂಡ ಬಿಡುಗಡೆ ಮಾಡಲಾಗಿದ್ದು ಅದನ್ನೂ ಸೇರಿಸಿ ಜು. 9ರ ಒಳಗೆ ಬಿಲ್‌ ಪಾವತಿಸುವಂತೆ ಜು. 8ರಂದು ಆದೇಶ ಹೊರಡಿಸಲಾಗಿದೆ. ಮೆಸ್ಕಾಂಗೆ ದ.ಕ.ದಲ್ಲಿ 27.22 ಕೋ.ರೂ.

ಬಾಕಿಯಿದ್ದು, 14.24 ಕೋ.ರೂ. ಎಸ್ಕೋ ಖಾತೆಯಲ್ಲಿದೆ. 14ನೇ ಹಣಕಾಸು ಯೋಜನೆಯಲ್ಲಿ 22.61 ಕೋ.ರೂ., 15ನೇ ಹಣಕಾಸು ಯೋಜನೆಯಲ್ಲಿ 5.7 ಕೋ.ರೂ. ಬಿಲ್‌ಗಾಗಿ ಇಡಲಾಗಿದೆ. ಉಡುಪಿಯಲ್ಲಿ 65 ಲಕ್ಷ ರೂ. ಬಾಕಿಯಿದ್ದು ಎಸ್ಕೋ ಖಾತೆಯಲ್ಲಿ 10 ಕೋ.ರೂ. ಬಾಕಿಯಿದೆ. 14ನೇ ಹಣಕಾಸು ಯೋಜನೆಯಲ್ಲಿ 15.3 ಕೋ.ರೂ., 15ನೇ ಯೋಜನೆಯಲ್ಲಿ 4.24 ಕೋ.ರೂ. ಮೀಸಲಿಡಲಾಗಿದೆ. ಚಿಕ್ಕಮಗಳೂರು 11.7 ಕೋ.ರೂ., ಶಿವಮೊಗ್ಗ 16.9 ಕೋ.ರೂ. ಮೆಸ್ಕಾಂಗೆ ಬಾಕಿಯಿದ್ದು ಚೆಸ್ಕಾಂಗೆ ಕೊಡಗು ಜಿಲ್ಲೆಯಿಂದ 2.6 ಕೋ.ರೂ. ಬಾಕಿಯಿದೆ.

ಬಾಕಿ
ಬೆಸ್ಕಾಂಗೆ 1,854 ಕೋ.ರೂ. ಬಾಕಿಯಿದ್ದು ಎಸ್ಕೋ ಖಾತೆಯಲ್ಲಿ 76.15 ಕೋ. ರೂ. ಇದೆ. ಮೆಸ್ಕಾಂಗೆ 60.38 ಕೋ.ರೂ.(65.28 ಕೋ.ರೂ.), ಹೆಸ್ಕಾಂಗೆ 292.6 ಕೋ.ರೂ. (156.9 ಕೋ. ರೂ.), ಗೆಸ್ಕಾಂಗೆ 743.7 ಕೋ.ರೂ. (67 ಕೋ. ರೂ.), ಚೆಸ್ಕಾಂಗೆ 188.6 ಕೋ.ರೂ. ಬಾಕಿ ಇದ್ದು ಎಸ್ಕೋದಲ್ಲಿ 60.3 ಕೋ.ರೂ. ಬಾಕಿಯಿದೆ.

ಸತತ ಸಭೆ, ಮೇಲ್ವಿಚಾರಣೆ
ನಿರಂತರ ಮೇಲ್ವಿಚಾರಣೆ ಸಹಿತ ಕಳೆದ 7 ತಿಂಗಳಲ್ಲಿ 6 ಸಭೆಗಳನ್ನು ಪಂಚಾಯತ್‌, ತಾ.ಪಂ. ಅಧಿಕಾರಿಗಳ ಜತೆ ನಡೆಸಲಾಗಿದೆ. ಪಂಚಾಯತ್‌ ತೋರಿಸಿದ ಬಿಲ್‌ ಮೊತ್ತ ಹಾಗೂ ಮೆಸ್ಕಾಂನ ಬಿಲ್‌ನಲ್ಲಿ ವ್ಯತ್ಯಾಸ ಬಂದ ಕಾರಣ ಉಡುಪಿ ಹಾಗೂ ಕುಂದಾಪುರ ಮೆಸ್ಕಾಂ ಇಇಗಳ ಜತೆ ಸಭೆ ನಡೆಸಲಾಗಿತ್ತು. ಇದರಿಂದ ಸಾಧ್ಯವಾದಷ್ಟು ಬಿಲ್‌ ಪಾವತಿಯಾಯಿತು.
– ಪ್ರೀತಿ ಗೆಹಲೋಟ್‌, ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next