Advertisement
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಮೇಶ್, 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಈ ವೇಳೆ ಕೆಲ ಪ್ರಭಾವಿ ರಾಜಕಾರಣಿಗಳು, ತಮ್ಮ ಬಳಿ ಇದ್ದ 500 ಹಾಗೂ 1000 ರೂ. ನೋಟುಗಳನ್ನು ಕೊಟ್ಟು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಂಗ್ರಹವಾಗುವ 50 ಹಾಗೂ 100 ರೂ. ಮುಖ ಬೆಲೆ ನೋಟು ಪಡೆಯುವ ಮೂಲಕ ಅಕ್ರಮವೆಸಗಿದ್ದಾರೆ ಎಂದು ದೂರಿದರು.
ಪಾವತಿಸದಿರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ ಸುಮಾರು 410 ಕೋಟಿ ರೂ. ಹಣ ಅಕ್ರಮವಾಗಿ ಬದಲಾವಣೆಯಾಗಿದೆ ಎಂದು ದೂರಿದರು. ಬೆಂಗಳೂರು ಒನ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಿಎಂಎಸ್ ಕಂಪ್ಯೂಟರ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥರು ಸಹ ಅಕ್ರಮದಲ್ಲಿ ಶಾಮೀಲಾಗಿದ್ದು, ನೋಟು ಬದಲಾವಣೆಗೆ ಸಹಕರಿಸಿದ್ದಾರೆ. ಅದು ಸಹ ಕಮೀಷನ್ ಆಧಾರದ ಮೇಲೆ ಅಕ್ರಮ ನಡೆದಿರುವ ಅಕ್ರಮದ ಹಿಂದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಶಾಸಕ ಬೈರತಿ ಬಸವರಾಜ್ ಕೈವಾಡ ಇದ್ದು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ, ಜಾರಿ ನಿರ್ದೇಶನಾಲಯ, ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.
Related Articles
Advertisement
ಯಾರಾದರೂ ನಿಮ್ಹಾನ್ಸ್‌ಗೆ ಸೇರಿಸಿ ಬನ್ನಿ! ಎನ್.ಆರ್.ರಮೇಶ್ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವಶಾಸಕ ಭೈರತಿ ಬಸವರಾಜ, “ಆತನಿಗೆ ಬೇರೆ ಕೆಲಸವಿಲ್ಲದ ಕಾರಣ ಇಂತಹ ಆರೋಪಗಳನ್ನು ಮಾಡಿ ಕೊಂಡು ತಿರುಗುತ್ತಾನೆ.ಅವನೊಬ್ಬ ಮಾನಸಿಕ ಅಸ್ವಸ್ಥ ಯಾರಾದರೂ ಕರೆದುಕೊಂಡು ಹೋಗಿ ನಿಮ್ಹಾನ್ಸ್‌ಗೆ ಸೇರಿಸಬೇಕು. ಈ ಹಿಂದೆಯೂ ಕೆ.ಆರ್.ಪುರಕ್ಕೆ ಬಂದು 1500 ಕೋಟಿ ರೂ. ಅನುದಾನ ತಿಂದಿದ್ದಾರೆ ಎಂದು ಆರೋಪ ಮಾಡಿದ್ದ. ಅದು ಸುಳ್ಳಾಗಿದೆ. ಬೆಂಗಳೂರು ಒನ್ ಕೇಂದ್ರದಲ್ಲಿ ಈ ರೀತಿ ನೋಟುಗಳ ಬದಲಾವಣೆ ಮಾಡಲು ಸಾಧ್ಯವೇ? ಎಂದು ಹೇಳಿದ್ದಾರೆ.