Advertisement

ಕೇಬಲ್‌ ನಿಯಮ ಜಾರಿಗೆ ಸೂಚನೆ

12:24 PM Dec 07, 2019 | Team Udayavani |

ಚಾಮರಾಜನಗರ: ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೇಬಲ್‌ ಟಿ.ವಿ. ನೆಟ್‌ವರ್ಕ್‌ ಅಧಿನಿಯಮ ಕುರಿತ ಮೇಲ್ವಿಚಾರಣಾ ಹಾಗೂ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕೇಬಲ್‌ಟೆಲಿವಿಷನ್‌ ನೆಟ್‌ವರ್ಕ್‌ ಅಧಿನಿಯಮ ಗಳಡಿ ನಿಗದಿಪಡಿಸಿದ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸಾರ್ವಜನಿಕ ವ್ಯವಸ್ಥೆ ಅಥವಾ ಯಾವುದೇ ಸಮುದಾಯಕ್ಕೆ ಭಂಗ, ಪ್ರಚೋದನೆ ಮಾಡದಂತೆ ಕೇಬಲ್‌ ಟೆಲಿವಿಷನ್‌ ಚಾನಲ್‌ಗ‌ಳು ಪ್ರಸರಣವಿರಬೇಕೇದರು.

ಜಿಲ್ಲಾಮಟ್ಟದಲ್ಲಿ ದೂರು ಕೋಶವಾಗಿ ನಿರ್ವಹಣೆ ಮಾಡಬೇಕು. ಈ ಬಗ್ಗೆ ವ್ಯಾಪಕವಾಗಿ ತಿಳಿಸುವಂತಾಗಬೇಕು. ಕೇಬಲ್‌ ಟಿ.ವಿ ನೆಟ್‌ವರ್ಕ್‌ ನಿಯಮ ಗಳನ್ನು ಉಲ್ಲಂ ಸಿದ ಪ್ರಕರಣಗಳು, ದೂರುಗಳನ್ನು ಪರಿಶೀಲಿಸಬೇಕು. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಜಾಹೀರಾತು ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ಸ್ಥಳೀಯವಾಗಿ ಪ್ರಸಾರ ಮಾಡಿದ ಕಾರ್ಯಕ್ರಮ, ಜಾಹೀರಾತು ಸಂಬಂಧದ ದೂರುಗಳನ್ನು ಸ್ವೀಕರಿಸ ಬೇಕು. ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ ಆ್ಯಕ್ಟ್ ಅಂಶಗಳ ಬಗ್ಗೆ ಹೆಚ್ಚು ಮನವರಿಕೆ ಮಾಡಬೇಕು. ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಷ್ಪಕ್ಷಪಾತವಾಗಿ ಕೇಬಲ್‌ ಟೆಲಿವಿಷನ್‌ ಚಾನಲ್‌ಗ‌ಳು ಪ್ರಸಾರ ಮಾಡುವಂತೆ ನಿಗಾವಹಿಸಬೇಕು. ಯಾವುದೇ ಉಲ್ಲಂಘನೆ, ಗಂಭೀರತೆ ಕಂಡುಬಂದಲ್ಲಿ ಮುಂದಿನ ಕ್ರಮಕ್ಕಾಗಿ ಗಮನಕ್ಕೆ ತರಬೇಕೆಂದು ಹೇಳಿದರು.

ಸಭೆಯಲ್ಲಿ ಡಿವೈಎಸ್‌ಪಿ ಮೋಹನ್‌, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎನ್‌. ಎಂ.ಸರಸ್ವತಿ, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್‌, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಂ.ಆರ್‌.ಸುಮತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕನಿರ್ದೇಶಕ ಆರ್‌. ರಾಜು, ಸಹಾಯಕ ನಿರ್ದೇಶಕ ಎ.ರಮೇಶ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next