Advertisement

ಕಟ್ಟಡ ಕಾಮಗಾರಿ ಸ್ಥಳ ಬದಲಾವಣೆಗೆ ಸೂಚನೆ

12:40 PM Jun 29, 2021 | Team Udayavani |

ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳವನ್ನು ಶಾಸಕ ಎನ್‌. ಮಹೇಶ್‌ ಬದಲಿಸುವಂತೆ ಸೋಮವಾರ ಸೂಚಿಸಿದ್ದಾರೆ.

Advertisement

ಈ ಬಗ್ಗೆ ಸೋಮವಾರ “ಉದಯವಾಣಿ’ಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ಕೊಠಡಿ ನಿರ್ಮಾಣ ಬೇಡ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.

ಶಾಸಕ ಎನ್‌. ಮಹೇಶ್‌ ಇದಕ್ಕೆ ಭೂಮಿ ಪೂಜೆ ನೆರವೇರಿಸಲು ಸೋಮವಾರ ಆಗಮಿಸಿದ್ದರು. ನಂತರ ಈ ಕಟ್ಟಡ ಸಮುಚ್ಚಯದಲ್ಲಿರುವ ನಿರುಪಯುಕ್ತವಾದ 2 ಕೊಠಡಿಗಳು ಶಿಥಿಲಗೊಂಡಿವೆ. ಇದು ಬೀಳುವ ಸ್ಥಿತಿಯಲ್ಲಿದ್ದು ಈ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿದ ಶಾಸಕರು, ಸಂಬಂಧಪಟ್ಟ ಲೊಕೋಪಯೋಗಿ ಇಲಾಖೆಯ ಎಇಇ ಹಾಗೂ ಜೆಇಗೆ ಸೂಚನೆ ನೀಡಿ ಇದನ್ನು ಕೆಡವಿ ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿ ಎಂದು ಸೂಚಿಸಿದರು.

ನಂತರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 1 ಕೋಟಿ ರೂ. ವೆಚ್ಚದಲ್ಲಿ ನಬಾರ್ಡ್‌ ಯೋಜನೆಯಡಿ ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಭಾಗಕ್ಕೆ 2 ಕೊಠಡಿ, ಲ್ಯಾಬ್‌ ಹಾಗೂ ಶೌಚಗೃಹನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಎಇಇ ರಾಮಸ್ವಾಮಿ, ತಹಶೀಲ್ದಾರ್‌ ಜಯಪ್ರಕಾಶ್‌, ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ, ಪ್ರಾಂಶುಪಾಲ ಬಂಗಾರನಾಯಕ, ಉಪಪ್ರಾಂಶುಪಾಲ ನಂಜುಂಡಸ್ವಾಮಿ, ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮದರ್ಜೆಕಾಲೇಜುಪ್ರಾಂಶುಪಾಲ ಡಾ|ನೀಲಕಂಠಸ್ವಾಮಿ, ಪಪಂ ನಾಮ ನಿರ್ದೇಶಿತ ಸದಸ್ಯರಾದ ಮಹೇಶ್‌, ರಘು,ಮಹದೇವಸ್ವಾಮಿ, ಮಾಂಬಳ್ಳಿ ರಾಮು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next