ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲು ಜೂನ್-2020ರ ತಿಂಗಳಿಗೆ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ನೀಡುತ್ತಿದ್ದು ಅದರಂತೆ ಪಡಿತರ ವಿತರಿಸಲು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ.
ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಉಚಿತವಾಗಿ 35 ಕೆ.ಜಿ ಅಕ್ಕಿ (ಎನ್ ಎಫ್ ಎಸ್ ಎ), ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ (ಪಿಎಂಜಿಕೆಎವೈ) ಹಾಗೂ ಪ್ರತಿ ಕುಟುಂಬಕ್ಕೆ 2ಕೆ.ಜಿ ತೊಗರಿ ಬೆಳೆ ನೀಡಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಉಚಿತವಾಗಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2ಕೆ.ಜಿ ಗೋಧಿ ಹಾಗೂ 2 ಕೆ.ಜಿ ತೊಗರಿ ಬೆಳೆ ವಿತರಿಸಲಾಗುತ್ತಿದೆ.
ಎಪಿಎಲ್ ಪಡಿತರ ಚೀಟಿ ಹೊಂದಿದವ ಪ್ರತಿ ಕುಟುಂಬಕ್ಕೆ 15 ರೂ ದಂತೆ ಪ್ರತಿ ಕೆ.ಜಿಗೆ ಒಪ್ಪಿಗೆ ನೀಡಿದ ಹಾಗೂ ಒಪ್ಪಿಗೆ ನೀಡಲಾರದ ಪಡಿತರ ಚೀಟಿದಾರ ಏಕ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಎರಡಕ್ಕಿಂತಲೂ ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು. ಹೊಸ ಅರ್ಜಿ ಸಲ್ಲಿಸಿದ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಹಾಗೂ ಎ.ಪಿ.ಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿಗೆ ರೂ 15 ರಂತೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ವಲಸೆ ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗೆ ಮೇ ತಿಂಗಳಿಗೆ ಪಡಿತರ ಪಡೆದಿದ್ದರೆ ಜೂನ್ ತಿಂಗಳಿಗೆ ಉಚಿತವಾಗಿ 5 ಕೆ.ಜಿ ಅಕ್ಕಿ, 2 ಕೆ.ಜಿ ಕಡಲೆಕಾಳು ಹಾಗೂ ಮೇ ದಲ್ಲಿ ಪಡಿತರ ಪಡೆಯದಿದ್ದರೆ ಜೂನ್‌ಗೆ ಉಚಿತವಾಗಿ 10 ಕೆ.ಜಿ ಅಕ್ಕಿ, 2 ಕೆ.ಜಿ ಕಡಲೆಕಾಳು ನೀಡಲಾಗುವುದು. ಜೂನ್ 5 ರಿಂದ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಡಿತರ ವಿತರಣೆ ಕಾರ್ಯ ನಡೆಯಲಿದ್ದು, ಪಡಿತರ ಪಡೆಯಲು ಬರುವ ಸದಸ್ಯರು ಕಡ್ಡಾಯವಾಗಿ ಮಾಸ್ಕ್ (ಮುಖಗವಸು) ಧರಿಸಿರಬೇಕು. ಕೇಂದ್ರ ಸರ್ಕಾರದ ಗ್ರಾಹಕರ ಮತ್ತು ಆಹಾರ ನಾಗರಿಕ ಸರಬರಾಜು ಮಂತ್ರಾಲಯದ ಆದೇಶದನ್ವಯ ಓ.ಟಿ.ಪಿ ಮೂಲಕವೇ ಕಡ್ಡಾಯವಾಗಿ ಪಡಿತರ ವಿತರಿಸುತ್ತಿರುವುದರಿಂದ ಪಡಿತರ ಚೀಟಿದಾರರು ನೋಂದಾಯಿತ ಮೊಬೆ„ಲ್ ತರಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.