Advertisement

ನೋಟಿಸ್‌ ಜಾರಿ: ಆಕ್ಷೇಪಣೆಗೆ ಸೂಚನೆ

08:55 AM Jul 12, 2020 | Suhan S |

ಬೆಂಗಳೂರು: ಕೇಂದ್ರದ “ಸಾಂಕ್ರಾಮಿಕ ಕಾಯಿಲೆ ಕಾಯ್ದೆ- 1897’ರ ಕೆಲವು ಸೆಕ್ಷನ್‌ಗಳು ಹಾಗೂ “ಕರ್ನಾಟಕ ಸಾಂಕ್ರಾಮಿಕ ಕಾಯಿಲೆ (ಕೋವಿಡ್‌-19 ನಿಯಂತ್ರಣ)-2020′ ಅಧ್ಯಾದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತು ವಕೀಲೆ ತಾರ್ಜನಿ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ನಿರ್ದೇ ಶಕ ಹಾಗೂ ಕೇಂದ್ರ ಕಾನೂನು ಸಚಿವಾಲಯಕ್ಕೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ಅಲ್ಲದೇ ಅರ್ಜಿ ದಾರರು “ಸಾಂಕ್ರಾ ಮಿಕ ಕಾಯಿಲೆ ಕಾಯ್ದೆ- 1897’ರ ಸಾಂವಿ ಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವುದರಿಂದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಅವರಿಗೂ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿತು. ಸಾಂಕ್ರಾಮಿಕ ಕಾಯಿಲೆ ಕಾಯ್ದೆ-1897 ಇದು ವಸಾಹತುಶಾಹಿ ಯುಗದ 123 ವರ್ಷದ ಹಳೆಯ ಕಾನೂನು ಆಗಿದೆ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಮಹಾಮಾರಿ ಪ್ಲೇಗ್‌ ಕಾಯಿಲೆ ತಡೆಗಟ್ಟಲು ಈ ಕಾಯ್ದೆ ಜಾರಿಗೆ ತರಲಾಗಿತ್ತು. ಮೊದಲು ಕಾಯ್ದೆ ಜಾರಿಗೆ ತಂದವರೇ ಆನಂತರ ಅದನ್ನು ಕರಾಳ ಕಾಯ್ದೆ ಎಂದು ಕರೆದಿದ್ದರು. ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆಧ್ಯಾದೇಶವು ಅದೇ ಮಾದರಿಯಲ್ಲಿದೆ.

ಕೇಂದ್ರ ಸರ್ಕಾರದ ನೂರು ವರ್ಷದ ಹಳೆಯ ಕಾಯ್ದೆಯ ಅನೇಕ ಸೆಕ್ಷನ್‌ಗಳು ಮತ್ತು ರಾಜ್ಯ ಸರ್ಕಾರದ ಅಧ್ಯಾದೇಶದ ಹಲವು ಅಂಶಗಳು ಸಂವಿಧಾನ ದತ್ತ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿಗೆ ತದ್ವಿರುದ್ಧವಾಗಿವೆ. ಈ ದಮನಕಾರಿ ಕಾಯ್ದೆ ಮತ್ತು ಅಧ್ಯಾದೇಶವನ್ನು ಅಸಂವಿ ಧಾನಿಕ ಮತ್ತು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next