Advertisement

Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?

10:08 PM Jul 12, 2024 | Team Udayavani |

ನವದೆಹಲಿ: ಇದೀಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿರುವ ಬ್ರಾಂಡ್ ನ  ಮೊದಲ ಮೊಬೈಲ್ ಫೋನ್ ಭಾರತದಲ್ಲಿ ಮೊದಲ ದಿನವೇ ಮೂರೇ ಗಂಟೆ ಅವಧಿಯಲ್ಲಿ 1 ಲಕ್ಷ ಯೂನಿಟ್ ಗಳ ಮಾರಾಟ ಕಂಡಿದೆ!

Advertisement

ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ನಥಿಂಗ್ ನ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್  ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಮಾಡಿದೆ!

CMF ಫೋನ್ 1, ಆನ್ ಲೈನ್ ಮತ್ತು ಆಫ್ ಲೈನ್ ಸೇರಿ ವಿವಿಧ ಚಾನಲ್ ಗಳಲ್ಲಿ ಕೇವಲ ಮೂರು ಗಂಟೆಗಳಲ್ಲಿ 100,000 ಯುನಿಟ್ ಗಳನ್ನು ಮಾರಾಟ ಮಾಡುವ ಗಮನಾರ್ಹ ಸಾಧನೆ ಮಾಡಿದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒನ್ ಪ್ಲಸ್ ಕಂಪೆನಿಯ ಸಹಸ್ಥಾಪಕರಾಗಿದ್ದ ಕಾರ್ಲ್ ಪೇ ಸ್ಥಾಪಿಸಿದ ನೂತನ ಬ್ರಾಂಡ್ ನಥಿಂಗ್. ಅಲ್ಪ ಕಾಲದಲ್ಲೇ ಈ ಬ್ರಾಂಡ್, ಬಜೆಟ್ ದರದಲ್ಲಿ ತನ್ನ ಉತ್ತಮ ಗುಣಮಟ್ಟದ ಫೋನ್, ಇಯರ್ ಬಡ್ ಗಳಿಂದ ಹೆಸರು ಮಾಡಿದೆ.

ನಥಿಂಗ್ ತನ್ನ ಇನ್ನೊಂದು ಉಪಬ್ರಾಂಡ್ ಸಿಎಂಎಫ್ ಅನ್ನು ಹೊರ ತಂದಿದ್ದು, ಈ ಬ್ರಾಂಡ್ ನಡಿ ಸಿಎಂಎಫ್ ಫೋನ್, ಇಯರ್ ಬಡ್, ವಾಚ್, ಪವರ್ ಬ್ಯಾಂಕ್ ಗಳನ್ನು ಉತ್ಪಾದಿಸುತ್ತಿದೆ. ಇವು ಬಜೆಟ್ ಸ್ನೇಹಿಯಾಗಿವೆ. ಸಿಎಂಎಫ್ ನ ಮೊದಲ ಫೋನ್ ಸಿಎಂಎಫ್ ಫೋನ್ 1 ಅನ್ನು ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇಂದು ಅದರ ಮೊದಲ ಮಾರಾಟವಿದ್ದು, ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 1 ಲಕ್ಷ ಯೂನಿಟ್ ಗಳು ಮಾರಾಟವಾಗಿವೆ.

Advertisement

ನಥಿಂಗ್ ಫೋನ್ (2ಎ) ಬಿಡುಗಡೆಯಾಗಿದ್ದಾಗ 24 ಗಂಟೆ ಅವಧಿಯಲ್ಲಿ 1 ಲಕ್ಷ ಫೋನ್ ಮಾರಾಟವಾಗಿದ್ದವು. ಈ ಫೋನು ಆ ಸಾಧನೆಯನ್ನು ಮೂರೇ ಗಂಟೆಯಲ್ಲಿ ಮಾಡಿರುವುದು ವಿಶೇಷ.

ಈ ಪರಿಯ ವೇಗದ ಮಾರಾಟಕ್ಕೆ ಕಾರಣ, ಅದರ ಸ್ಪೆಸಿಫಿಕೇಷನ್ ಗೆ ಹೋಲಿಸಿದರೆ ಅದರ ದರ ಕೈಗೆಟುಕುವಂತಿರುವುದು. ಇದರ ದರ 6 ಜಿಬಿ 128 ಜಿಬಿಗೆ 15999 ರೂ. 8 ಜಿಬಿ 128 ಜಿಬಿಗೆ 17,999 ರೂ. ಇದೆ. ಮೊದಲ ದಿನ 1 ಸಾವಿರ ರೂ. ರಿಯಾಯಿತಿ ಸಹ ಇತ್ತು.

ಈ ದರಕ್ಕೆ ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ಇದ್ದು, ಈ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. 16 GB ವರೆಗಿನ RAM ವಿಸ್ತರಿಸಬಹುದು. ಈ ಪ್ರೊಸೆಸರ್ ನಥಿಂಗ್ನೊಂದಿಗೆ ಸಹ-ಇಂಜಿನಿಯರಿಂಗ್ ಆಗಿದೆ. 5000 mAh ಬ್ಯಾಟರಿ ಹೊಂದಿದ್ದು, 33 ವಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ.

ಸೋನಿ 50 MP ಮುಖ್ಯ ಕ್ಯಾಮೆರಾ ಹೊಂದಿದ್ದು,2 ಮೆಪಿ ಡೆಪ್ತ್ ಸೆನ್ಸರ್ ಇದೆ.16 ಮೆ.ಪಿ. ಮುಂಭಾಗದ ಕ್ಯಾಮರಾ ಒಳಗೊಂಡಿದೆ. 15 ಸಾವಿರ ರೂ. ರೇಂಜಿನಲ್ಲಿ 6.67 ಇಂಚಿನ LTPS ಸೂಪರ್ AMOLED ಪರದೆ ಹಾಕಿರುವುದು ವಿಶೇಷ. ಅಲ್ಟ್ರಾ-ಸ್ಮೂತ್ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಹ ಹೊಂದಿದೆ. ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಕೇಸ್ ಗಳನ್ನು ಬದಲಾಯಿಸುವ ಆಯ್ಕೆಯನ್ನೂ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next