Advertisement

Signal Jump: ಚಾಲನೆ ವೇಳೆ ಮೊಬೈಲ್‌ ಬಳಕೆ… ಸಿಗ್ನಲ್‌ ಜಂಪ್‌ಗಿಂತ 4 ಪಟ್ಟು ಹೆಚ್ಚಳ: IIT

09:47 PM Sep 04, 2024 | Team Udayavani |

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮಾಡುತ್ತಿರುವುದು ಸಿಗ್ನಲ್‌ ಜಂಪ್‌ಗಿಂತ 4 ಪಟ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ವರದಿಯನ್ನು ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ಹೇಳಿದ್ದಾರೆ. ಈಗಿನ ಅಪಘಾತಗಳಲ್ಲಿ ಶೇ.75ರಷ್ಟು ಅತಿ ವೇಗದ ಚಾಲನೆಯಿಂದಾಗುತ್ತಿದೆ. ಚಾಲನೆ ವೇಳೆ ರಾಂಗ್‌ ಸೈಡ್‌ ಹಾಗೂ ಮೊಬೈಲ್‌ ಬಳಕೆಯಂತ ಅಪಾಯಕಾರಿ ಪ್ರವೃತ್ತಿಯೇ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದು ಐಐಟಿ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Advertisement

2021ರಲ್ಲಿ ರಸ್ತೆ ಅಪಘಾತದಿಂದ 56,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 1 ವರ್ಷದ ನಂತರ ಈ ಸಂಖ್ಯೆ 61,038ಕ್ಕೆ ಏರಿಕೆಯಾಗಿದೆ. ಇದರಲ್ಲಿ 40,000ಕ್ಕೂ ಹೆಚ್ಚು ಸಾವುಗಳು ಅತಿ ವೇಗದಿಂದ ಸಂಭವಿಸಿವೆ. ಮೊಬೈಲ್‌ ಬಳಕೆ ಮತ್ತು ರಾಂಗ್‌ ಸೈಡ್‌ನ‌ಲ್ಲಿ ವಾಹನ ಚಲಾಯಿಸಿ ಆದ ಅಪಘಾತದ ಸಾವು ಪ್ರಮಾಣವು ಶೇ. 21ಕ್ಕೆ ಏರಿಕೆಯಾಗಿದೆ.

2021ರಲ್ಲಿ ಮೊಬೈಲ್‌ ಬಳಕೆ ಚಾಲನೆಯಿಂದ 1,040 ಸಾವುಗಳು ಸಂಭವಿಸಿದ್ದರೆ, ರೆಡ್‌ ಸಿಗ್ನಲ್‌ ಉಲ್ಲಂಘನೆಗಾಗಿ 222 ಮತ್ತು 2022ರಲ್ಲಿ 271 ಸಾವುಗಳು ಸಂಭವಿಸಿದೆ. ಇದರಿಂದ ಈ ಸಂಖ್ಯೆ 1,132ಕ್ಕೆ ಏರಿದೆ. ಮತ್ತೂಂದೆಡೆ, ರಾಂಗ್‌ ಸೈಡ್‌ ಡ್ರೆ„ವಿಂಗ್‌ನಿಂದ ಈ ಎರಡು ವರ್ಷಗಳಲ್ಲಿ 2,823 ಮತ್ತು 3,544 ಮಂದಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next