Advertisement

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

12:24 PM Nov 27, 2020 | Nagendra Trasi |

ಮುಂಬೈ: ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಮನೆಯನ್ನು ಬಿಎಂಸಿ(ಬೃಹತ್ ಮುಂಬಯಿ ಮಹಾನಗರಪಾಲಿಕೆ) ಧ್ವಂಸಗೊಳಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಶುಕ್ರವಾರ(ನವೆಂಬರ್ 27, 2020), ಇದೊಂದು ದ್ವೇಷದ ನಡವಳಿಕೆಯೇ ಹೊರತು, ಕಾನೂನು ಸಮ್ಮತವಾದುದಲ್ಲ ಎಂದು ತಿಳಿಸಿದೆ.

Advertisement

ಸೆಪ್ಟೆಂಬರ್ 9(2020)ರಂದು ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿದ್ದ ನಟಿ ಕಂಗನಾ ರಣಾವತ್ ನಿವಾಸದ ಒಂದು ಭಾಗವನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಗಳು ಒಡೆದು ಹಾಕಿದ್ದರು. ಏತನ್ಮಧ್ಯೆ ಕಂಗನಾ ಬಿಎಂಸಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಬಿಎಂಸಿ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿತ್ತು.

ಮಹಾರಾಷ್ಟ್ರ ಸರ್ಕಾರ ಹಾಗೂ ಆಡಳಿತಾರೂಢ ಶಿವಸೇನಾ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ದ್ವೇಷದಿಂದ ಬಿಎಂಸಿ ತನ್ನ ಮನೆಯನ್ನು ಭಾಗಶಃ ಒಡೆದು ಹಾಕಿರುವುದಾಗಿ ಕಂಗನಾ ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.

ನಟಿ ಕಂಗನಾ ರಣಾವತ್ ಅವರು ಅಕ್ರಮವಾಗಿ ಮನೆ ಕಟ್ಟಿರುವುದಾಗಿ ಬಿಎಂಸಿ ಆರೋಪಿಸಿತ್ತು. ಕಂಗನಾ ಅವರು ಸುಮಾರು 14 ನಿಯಮವನ್ನು ಉಲ್ಲಂಘಿಸಿರುವುದಾಗಿ ಬಿಎಂಸಿ ಪಟ್ಟಿ ಮಾಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಕಂಗನಾ ರಾಜ್ಯದಿಂದ ಹೊರಗಿದ್ದ ವೇಳೆ, ಕೇವಲ 24ಗಂಟೆಗಳ ಕಾಲಾವಧಿಯಲ್ಲಿ ಉತ್ತರ ನೀಡುವಂತೆ ಬಿಎಂಸಿ ಸೂಚಿಸಿತ್ತ. ಆದರೆ ಆಕೆಯ ಮನವಿಯನ್ನು ಪುರಸ್ಕರಿಸಿ ಹೆಚ್ಚಿನ ಸಮಯವನ್ನು ನೀಡದಿರುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next