Advertisement

ಟೆಕ್ಸಾಸ್‌ ಸಾರಿಗೆ ಸಂಸ್ಥೆಗೆ ಭಾರತದ ಸಂಜಯ್‌ ಮುಖ್ಯಸ್ಥ

09:26 PM Feb 19, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ನ ಹೂಸ್ಟನ್‌ನ ಪ್ರಸಿದ್ಧ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿರುವ ಹಾರಿಸ್‌ ಕೌಂಟಿ ಮೆಟ್ರೊಪೊಲಿಟನ್‌ ಟ್ರಾನ್ಸಿಸ್ಟ್‌ ಅಥಾರಿಟಿಗೆ ಅಧ್ಯಕ್ಷರಾಗಿ ಭಾರತ ಮೂಲದ ಇಂಜಿನಿಯರ್‌ ಸಂಜಯ್‌ ರಾಮಭದ್ರನ್‌ ನೇಮಕಗೊಂಡಿದ್ದಾರೆ.

Advertisement

ಟೆಕ್ಸಾಸ್‌ನಲ್ಲಿ ಸಾರಿಗೆ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯರು ಇವರಾಗಿದ್ದಾರೆ.

ಸಂಜಯ್‌ ಅವರು ರಾಜಸ್ಥಾನದ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮತ್ತು ಸೈನ್ಸ್‌ನಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದಿದ್ದು, ಟೆಕ್ಸಾಸ್‌ನ ಎ ಆ್ಯಂಡ್‌ ಎಂ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

2015ರಿಂದ ಮೆಟ್ರೋ ಬೋರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ಬಂಡವಾಳ ಮತ್ತು ಕಾರ್ಯತಂತ್ರ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next