Advertisement

ನೋಟು ರದ್ದತಿ ಮೋದಿ ದಿಟ್ಟ ಕ್ರಮ: ಗೂಗಲ್‌ ಸಿಇಒ ಪಿಚೈ

03:45 AM Jan 06, 2017 | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಕ್ರಮವು ಅತ್ಯಂತ ದಿಟ್ಟತನದ ಕ್ರಮವಾಗಿದೆ ಎಂದು ಗೂಗಲ್‌ನ ಭಾರತ ಸಂಜಾತ ಮುಖ್ಯಸ್ಥ ಸುಂದರ್‌ ಪಿಚೈ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Advertisement

ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದ ನೆಗೆ ಒದಗುವ ಹಣದ ವಿರುದ್ಧ ಗುರಿ ಇರಿಸಿ ಮೋದಿ ನಡೆಸಿರುವ ಈ ದಾಳಿಯು ಅತ್ಯಂತ ಧೀರತನಲ್ಲಾಗಿದ್ದು ದೇಶವನ್ನು ಡಿಜಿಟಲ್‌ ಪಾವತಿಯತ್ತ ಮುನ್ನಡೆಸುವ ಅಮೋಘ ಕ್ರಮವಾಗಿದೆ ಎಂದು ಪಿಚೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ನಡುವೆ, ಗುರುವಾರ ಪಿಚೈ ಅವರು ಐಐಟಿ ಖರಗಪುರಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next