Advertisement

ನೋಟು ಅಮಾನ್ಯದಿಂದ ಜಿಡಿಪಿ ಕುಸಿತ

02:27 PM Nov 09, 2017 | Team Udayavani |

ದೇವನಹಳ್ಳಿ: ಬ್ಲಾಕ್‌ ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್‌ ವತಿಯಿಂದ ಕೇಂದ್ರ ಸರ್ಕಾರ ಕಳೆದ ವರ್ಷ ನೋಟು ಅಮಾನ್ಯ ಮಾಡಿ ಒಂದು ವರ್ಷ ಕಳೆದಿದ್ದರಿಂದ ಆ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವುದರ ಮೂಲಕ ಪ್ರತಿಭಟಿಸಿದರು. ನಗರದ ಪ್ರವಾಸಿ ಮಂದಿರ ದಿಂದ ಮಿನಿವಿಧಾನಸೌಧದವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟು ಮಿನಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ವಿರುದ್ಧಧಿಕ್ಕಾರದ ಘೋಷಣೆ ಕೂಗಿದರು.

Advertisement

ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು  ರದ್ದುಗೊಳಿಸಿದ ಕೇಂದ್ರದ ಕ್ರಮದಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಜನರಿಗೆ ತೊಂದರೆ ನೀಡಿದ ಸರ್ಕಾರಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಮೊದಲೇ ತಿಳಿದತ್ತು: ಈ ವೇಳೆ ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ಕೇಂದ್ರದ ನೋಟು ಅಮಾನ್ಯಿàಕರಣದಿಂದ 100 ಕ್ಕೂ ಹೆಚ್ಚು ಜನ ಸರದಿಯಲ್ಲಿ ನಿಂತು ಸಾವನ್ನಪ್ಪಿದ್ದಾರೆ. ಆರ್ಥಿಕತೆ ಜಾnನವಿಲ್ಲದ ಮೋದಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನೋಟು ಅಮಾನ್ಯಿಕರಣ ಮಾಡಿ ರಾಷ್ಟ್ರವನ್ನು
ಅಲ್ಲೋಲಕಲ್ಲೋಲಕ್ಕೆ ಮಾಡಿದ್ದಾರೆ. ಇಂತಹ ಸರ್ಕಾರವನ್ನು ಕೂಡಲೇ ಕಿತ್ತೂಗೆಯಬೇಕು.

ಬಿಜೆಪಿ ಜನಪ್ರತಿನಿಧಿಗಳಿಗೆ ನೋಟು ಅಮಾನ್ಯಿಕರಣದ ಮೊದಲೇ ವಿಷಯ ತಿಳಿದಿತ್ತು. ಅವರ ನೋಟುಗಳು ಬದಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಚ್ಛೇ ದಿನ್‌ ಅಲ್ಲ : ಮಾಜಿ ಶಾಸಕ ಕೆ. ವೆಂಕಟಸ್ವಾಮಿ ಮಾತನಾಡಿ, ಬಡವರಿಗೆ ಬರಲಿಲ್ಲ ಅಚ್ಛೇ ದಿನ್‌, ಅಂಬಾನಿಗೆ ಅಚ್ಛೇ ದಿನ್‌ ಬಂದಿತು. ಅಚ್ಛೇ ದಿನ್‌ ಅಲ್ಲ. ಸರ್ವಾಧಿಕಾರಿ ಆಡಳಿತವನ್ನು ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ
ದುರಾಡಳಿತಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಜನರು ಕಲಿಸುತ್ತಾರೆ.

Advertisement

ಯುಪಿಎ ಕಾಲದಲ್ಲಿ ಜಿಡಿಪಿ ಪ್ರಗತಿಯಲ್ಲಿತ್ತು. ಆದರೆ ಮೋದಿ ಪ್ರಧಾನಿಯಾದ ಮೇಲೆ ಜಿಡಿಪಿ ಪತನವಾಗಿದೆ. ಜಿಎಸ್‌ಟಿ ಯೋಜನೆ ತಂದು ಬಡವರಿಗೆ ಯಾವುದೇ ಊಟ ತಿಂದರೂ ಜಿಎಸ್‌ಟಿ ನೀಡುವಂತೆ ಆಗಿದೆ. ಬ್ಯಾಂಕುಗಳ ಖಾತೆಗಳಿಗೆ 15 ಲಕ್ಷ ರೂ. ಹಾಕುತ್ತೇವೆಂದು ಸುಳ್ಳು ಭರವಸೆ ನೀಡಿ ಜನತೆಗೆ ಮೋಸ ಮಾಡಿದ್ದಾರೆ. ಗ್ಯಾಸ್‌ ಬೆಲೆ ಏರಿಕೆ, ಪೆಟ್ರೋಲ್‌-ಡೀಸೆಲ್‌ ಏರಿಕೆ, ಅಗತ್ಯತೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯು ವಂತಾಗಿದೆ. ರಾಷ್ಟ್ರದಲ್ಲಿ ಜನರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರ ಬಿಜೆಪಿ ಸರ್ಕಾರವಾಗಿದೆ ಎಂದು ಕಿಡಿ ಕಾರಿದರು.

ಕಪ್ಪು ಹಣ ತರುವಲ್ಲಿ ವಿಫ‌ಲ: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ಚುನಾವಣೆ ವೇಳೆಯಲ್ಲಿ ವಿದೇಶದಿಂದ ಕಪ್ಪು ಹಣ
ತರುತ್ತೇವೆಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಪ್ಪುಹಣ ತರುವಲ್ಲಿ ವಿಫ‌ಲವಾಗಿದೆ ಎಂದು ದೂರಿದರು.

ಜಿಪಂ ಸದಸ್ಯರಾದ ಲಕ್ಷ್ಮೀನಾರಾಯಣ್‌, ಕೆ.ಸಿ.ಮಂಜುನಾಥ್‌, ರಾಧಾಮ್ಮ, ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್‌, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಮಾಜಿ ಅಧ್ಯಕ್ಷ ಎ.ಚಿನ್ನಪ್ಪ, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜ್‌, ಖಜಾಂಚಿ ಶಾಂತಕುಮಾರ್‌, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಚೇತನ್‌ ಗೌಡ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಅಧ್ಯಕ್ಷ ಎಂ.ಲೋಕೇಶ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ನಾಗೇಶ್‌, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಸುಮಂತ್‌, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುನಿರಾಜು, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಡೇವಿಡ್‌ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಕೋದಂಡರಾಮಯ್ಯ, ಕಸಬಾ ಹೋಬಳಿ ಅಧ್ಯಕ್ಷ ದುಬಾಯಿ ಮಂಜುನಾಥ್‌, ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ನಂದಕುಮಾರ್‌, ತಾಪಂ ಮಾಜಿ ಸದಸ್ಯ ಲಕ್ಷ್ಮಣ್‌ ಗೌಡ, ಮುಖಂಡರಾದ ಎಸ್‌. ನಾಗೇಗೌಡ, ಪಟಾಲಪ್ಪ, ಹೈದರ್‌ ಸಾಬ್‌, ಜಗನ್ನಾಥಚಾರ್‌, ಬೂದಿಗೆರೆ ನಜೀರ್‌ ಅಹಮದ್‌, ಅಂಜಲಿ, ಆಶಾರಾಣಿ, ಶಾರದಮ್ಮ, ಮಮತಾ, ಮಂಜುಳಾ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಮನವಿ ಪತ್ರ ಸಲ್ಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next