Advertisement
ಭಾನುವಾರ ರೋಟರಿ ಬಾಲಭವನದಲ್ಲಿ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ದಾವಣಗೆರೆಯ ಪ್ರಗತಿಪರ ಸಾಹಿತ್ಯ ಪರಿಷತ್ತು ಮತ್ತು ಕಾವ್ಯ ಮಂಡಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಸಂತೇಬೆನ್ನೂರಿನ ಯುವ ಕವಿ ಸಂತೆಬೆನ್ನೂರು ಫೈಜ°ಟ್ರಾಜ್ ಮಾತನಾಡಿ, ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ಅತಿ ಸರಳವಾದ ಮಾತಿನಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ, ಹೇಳುವಂತಹ ಶಕ್ತಿ ಇತ್ತು. ಸಾಹಿತ್ಯ ವಲಯದಲ್ಲಿ ಈ ರೀತಿಯ ನೆನಪು ಕಾರ್ಯಕ್ರಮಗಳ ಮೂಲಕ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುವುದು ಒಳ್ಳೆಯ ಕಾರ್ಯ.
ಸಾಂಸ್ಕೃತಿಕ ವಲಯದಲ್ಲಿ ಇಂತದ್ದು ಸದಾ ಕಾಡಬೇಕು ಎಂದು ಬಯಸಿದರು. ಇಟಗಿ ಈರಣ್ಣ ಅವರಗಿಂತಲೂ ಮುಂಚೆಯೇ ಈ.ಗೋ. ದುಂಡೆಪ್ಪ, ಕೆಸಿಕೆ, ಆರ್. ಎನ್. ಕುಬೇರಪ್ಪ ಮುಂತಾದವರು ಶಾಯಿರಿ ರಚಿಸಿದ್ದರು. ಪಾಟೀಲಪ್ಪ ಅವರಿಂದ ಶಾಯಿರಿ ಹುಚ್ಚು ಬೆಳೆಸಿಕೊಂಡಂತಹ ಈರಣ್ಣ ಅವರು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಮೂಲಕ ಕನ್ನಡ ಲೋಕಕ್ಕೆ ಶಾಯಿರಿ ಕಾಣಿಕೆ ನೀಡಿದರು ಎಂದು ಸ್ಮರಿಸಿದರು.
ವಿಶ್ರಾಂತ ಪ್ರಾಚಾರ್ಯ ಪ್ರೊ| ಎಚ್.ಎ. ಭಿಕ್ಷಾವರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಹರಪನಹಳ್ಳಿ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ್, ಪ್ರಗತಿಪರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳ ಕಾರ್ಯದರ್ಶಿ ನಾಗರಾಜ ಸಿರಿಗೆರೆ ಇತರರು ಇದ್ದರು.