Advertisement
ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ದಿನದಿಂದ ದಿನಕ್ಕೆ ಗಾತ್ರದಲ್ಲಿ ಸಣ್ಣದಾಗುತ್ತಿದ್ದು, ಇದನ್ನು ದೃಷ್ಟಿ ವಿಕಲ ಚೇತನರು ಗುರುತಿಸಲು ಕಷ್ಟವಾಗುತ್ತಿದೆ ಎಂದು ಅಂಧರ ರಾಷ್ಟ್ರೀಯ ಸಂಘಟನೆ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಮುಂದಿನ ವಿಚಾರಣೆಯ ವೇಳೆ ಆ್ಯಪ್ ಹೇಗೆ ಕೆಲಸ ಮಾಡುತ್ತದೆ ಎಂಬುದಾಗಿ ಹೈಕೋರ್ಟ್ ಪೀಠಕ್ಕೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಮುಂದಿನ ವಿಚಾರಣೆಯನ್ನು ನ. 4ಕ್ಕೆ ನಿಗದಿಸಲಾಗಿದೆ. ನೋಟು ಹಾಗೂ ನಾಣ್ಯಗಳನ್ನು ಜೇಬಿಗೆ ಅನುಕೂಲವಾಗುವಂತೆ ಕಿರಿದಾಗಿಸಲಾಗಿದೆ. ಅಮೆರಿಕ ಹಾಗೂ ಇತರ ದೇಶಗಳ ಕರೆನ್ಸಿಯ ಮಾದರಿಯನ್ನು ಇದಕ್ಕೆ ಅನುಸರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದ್ದು, ಸದ್ಯಕ್ಕೆ ನೋಟು, ನಾಣ್ಯಗಳನ್ನು ಇನ್ನೂ ಸಣ್ಣದಾಗಿಸುವ ಇರಾದೆಯಿಲ್ಲ ಎಂದಿದೆ. Advertisement
ದೃಷ್ಟಿ ವಿಕಲಚೇತನರಿಗಾಗಿ ನೋಟು ಗುರುತಿಸುವ ಆ್ಯಪ್
01:05 AM Sep 07, 2019 | mahesh |
Advertisement
Udayavani is now on Telegram. Click here to join our channel and stay updated with the latest news.