Advertisement

ಶೀಘ್ರ ಎಟಿಎಂಗಳಲ್ಲೂ ಸಿಗಲಿವೆ 200ರ ನೋಟು

07:20 AM Jan 05, 2018 | Team Udayavani |

ನವದೆಹಲಿ: ಚಿಲ್ಲರೆ ಸಮಸ್ಯೆ ನಿವಾರಣೆಗಾಗಿ ಬಿಡುಗಡೆ ಮಾಡಿರುವ 200 ರೂ. ಮುಖಬೆಲೆಯ ನೋಟು ಎಟಿಎಂಗಳಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಎಲ್ಲ ಬ್ಯಾಂಕುಗಳಿಗೂ ಆರ್‌ಬಿಐ ಸೂಚನೆ ನೀಡಿದೆ.

Advertisement

ಸದ್ಯ 200 ರೂ. ನೋಟುಗಳು ಬ್ಯಾಂಕುಗಳಲ್ಲಿ ಸಿಗುತ್ತಿವೆಯೇ ಹೊರತು ಎಟಿಎಂಗಳಲ್ಲಿ ಸಿಗುತ್ತಿಲ್ಲ. ಇಲ್ಲೂ ಅವುಗಳು ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದರೆ, ಎಟಿಎಂಗಳನ್ನು ಮೇಲ್ದರ್ಜೆಗೆ (ರಿಕ್ಯಾಲಿಬರೇಟ್‌) ಏರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆರ್‌ಬಿಐ ಸೂಚಿಸಿದೆ. ಹೀಗಾಗಿ ಬ್ಯಾಂಕ್‌ಗಳು ಹಣ ವಿಥ್‌ಡ್ರಾ ಮಾಡುವ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಲು 110 ಕೋಟಿ ರೂ.ಗಳನ್ನು ವ್ಯಯಿಸ ಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ತಿ ಗೊಳ್ಳಲು 6 ತಿಂಗಳು ಪೂರ್ತಿಯಾಗಬಹುದು.

ಮಿತಿಗೆ ಚಿಂತನೆ?: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ 2 ಸಾವಿರ ರೂ. ನೋಟುಗಳನ್ನು ವಿಥ್‌ಡ್ರಾ ಮಾಡುವುದರ ಮೇಲೆ ನಿಯಂತ್ರಣ ಹೇರಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 2 ಸಾವಿರ ರೂ. ನೋಟುಗಳು ಎಟಿಎಂನಲ್ಲಿ ಸಿಗಲು ಆರಂಭವಾದ ಬಳಿಕ 2017ರ ಸೆಪ್ಟೆಂಬರ್‌ ವೇಳೆಗೆ ವಿಥ್‌ಡ್ರಾವಲ್‌ ಮಿತಿ 2.44 ಕೋಟಿ ರೂ.ಗೆ ಏರಿಕೆಯಾಗಿದೆ. 2016ರ ಸೆಪ್ಟೆಂಬರ್‌ ವೇಳೆಗೆ ಅದರ ಪ್ರಮಾಣ 2.22 ಕೋಟಿ ರೂ. ಇತ್ತು. ಗಮನಾರ್ಹ ಅಂಶವೆಂದರೆ ಕಳೆದ ಜುಲೈ ನಲ್ಲಿಯೇ 2 ಸಾವಿರ ರೂ. ನೋಟು ಮುದ್ರಣ ವನ್ನು ಆರ್‌ಬಿಐ ಸ್ಥಗಿತಗೊಳಿಸಿತ್ತು. 

ಹೊಸ 10 ರೂ. ನೋಟು: ಇದೇ ವೇಳೆ, ಆರ್‌ಬಿಐ ಹೊಸ 10 ರೂ. ಮುಖಬೆಲೆಯ ನೋಟು ಗಳನ್ನು ವಿನ್ಯಾಸ ಮಾಡಿದ್ದು, ಇದು ಚಾಕೊಲೇಟ್‌ ಬೂದು ಬಣ್ಣದಲ್ಲಿರಲಿದೆ. ನೋಟಿನಲ್ಲಿ ಕೊನಾರ್ಕ್‌ ಸೂರ್ಯ ದೇಗುಲದ ಚಿತ್ರ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next