Advertisement

ಪ್ರಧಾನಿಯಾಗುವ ರಾಹುಲ್‌ ಹೇಳಿಕೆಯಲ್ಲಿ ತಪ್ಪಿಲ್ಲವೆಂದ ಎನ್‌ಸಿಪಿ

12:23 PM May 09, 2018 | Team Udayavani |

ಮುಂಬಯಿ: ತನ್ನ ಪಕ್ಷ 2019ರ ಲೋಕ ಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದಲ್ಲಿ ತಾನು ಪ್ರಧಾನಿಯಾಗುವುದಕ್ಕೆ ಸಿದ್ಧನೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನೀಡಿರುವ ಹೇಳಿಕೆಯಲ್ಲಿ ತಪ್ಪೇನೂ ಇಲ್ಲವೆಂದು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಹೇಳಿದೆ.

Advertisement

2004ರಿಂದ 2014ರವ ರೆಗೆ ಯುಪಿಎ ಸರಕಾರದಲ್ಲಿ ಪಾಲುದಾರನಾಗಿದ್ದ ಎನ್‌ಸಿಪಿ ಮುಂದಿನ ವರ್ಷ ನಡೆ ಯುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಜತೆ ಕೈಜೋ ಡಿ ಸುವ ನಿರೀಕ್ಷೆ ಇದೆ. ರಾಹುಲ್‌ ಅವರ ಹೇಳಿಕೆಯನ್ನು ಆಕ್ಷೇಪಿಸುವುದಕ್ಕೇನೂ ಇಲ್ಲ. “ಜನರು ದೇಶವನ್ನು ಆಳುವ ಹೊಣೆಯನ್ನು ಕಾಂಗ್ರೆಸ್‌ಗೆ ವಹಿಸಲು ನಿರ್ಧರಿಸಿದರೆ ರಾಹುಲ್‌ ಅವರು ಪ್ರಧಾನಿ ಹುದ್ದೆ ಅಭ್ಯರ್ಥಿಯಾಗುವರು’ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ನವಾಬ್‌ ಮಲಿಕ್‌ ಹೇಳಿದರು.

ಎನ್‌ಸಿಪಿ ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸುವುದರಿಂದ  ಮತ್ತು ಸೀಮಿತ ಸಂಖ್ಯೆಯ ಸಂಸದರನ್ನು ಹೊಂದಿರುವುದರಿಂದ ಪಕ್ಷಾಧ್ಯಕ್ಷ ಶರದ್‌ ಪವಾರ್‌ ಅವರು ಈ ಹಿಂದೆಯೇ ತಾವು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಇಲ್ಲವೆಂದು ಹೇಳಿದ್ದರು ಎಂದು ಮಲಿಕ್‌ ತಿಳಿಸಿದರು.

ಈ ಮುನ್ನ ಬೆಂಗಳೂರಿನಲ್ಲಿ ಮಂಗಳವಾರ  ರಾಹುಲ್‌ ಅವರು ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ತಾನು ಪ್ರಧಾನಿಯಾಗುವು ದಕ್ಕೆ ಸಿದ್ಧನೆಂದು ಹೇಳಿದ್ದರು. ನೀವು ಮುಂದಿನ ಪ್ರಧಾನಿಯಾಗುವಿರಾ ಎಂದು ಅವರನ್ನು ಪ್ರಶ್ನಿಸಿದಾಗ ಅವರು, “ಇದು ಅನೇಕ ವಿಚಾರಗಳನ್ನು ಅವಲಂಬಿಸಿರುವುದು. ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಉತ್ತಮ ಸಾಧನೆ ತೋರುತ್ತದೆ, ಅಂದರೆ ಅದು ಅತಿ ದೊಡ್ಡ ಪಕ್ಷವಾಗಿ ಮೂಡಿ ಬರುವುದೇ ಎಂಬುದನ್ನು ಇದು ಅವಲಂಬಿಸಿರುತ್ತದೆ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next