Advertisement

ಚೀನದಲ್ಲೂ ಆರ್ಥಿಕ ಸ್ಥಿತಿ ನೆಟ್ಟಗಿಲ್ಲ

04:37 PM May 03, 2020 | mahesh |

ಬೀಜಿಂಗ್‌: ಇಡೀ ವಿಶ್ವಕ್ಕೆ ಮಾರಣಾಂತಿಕ ಸೋಂಕನ್ನು ಹಂಚಿರುವ ಆರೋಪಕ್ಕೆ ಗುರಿಯಾಗಿರುವ ಚೀನದ ಆರ್ಥಿಕ ಆರೋಗ್ಯವೂ ಬಹಳ ಚೆನ್ನಾಗಿಲ್ಲ. ಈಗಾಗಲೇ ಜಗತ್ತಿನ ಬಹಳಷ್ಟು ದೇಶಗಳು ಆರ್ಥಿಕ ಕುಸಿತದ ಭೀತಿ ಎದುರಿಸುತ್ತಿವೆ. ನಾಜೂಕಾಗಿ ಸೋಂಕನ್ನು ತಡೆಗಟ್ಟಿದ ಕೀರ್ತಿ ಪಡೆದು ಈಗಾಗಲೇ ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳ ಚಟುವಟಿಕೆಯನ್ನು ಆರಂಭಿಸಿರುವ ಚೀನಕ್ಕೀಗ ವಿಶ್ವದ ಎಲ್ಲ ರಾಷ್ಟ್ರಗಳ ಮುನಿಸು ಎದುರಿಸಬೇಕಾದ ಸಂಕಷ್ಟದಲ್ಲಿದೆ. ಇದರೊಂದಿಗೇ ಅಲ್ಲಿಯೂ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಆರ್ಥಿಕ ನಷ್ಟದ ಭೀತಿ ಎದುರಿಸುತ್ತಿದೆ.

Advertisement

ಪ್ರಸ್ತುತ ಸ್ಥಗಿತಗೊಂಡಿದ್ದ ಬಹುತೇಕ ಮಾರುಕಟ್ಟೆಗಳು, ಕಂಪೆನಿಗಳು, ಅಂಗಡಿಗಳು ಕಾರ್ಯಾಚರಿಸಲು ಪ್ರಾರಂಭಿಸಿವೆ. ಇದಕ್ಕೆ ಚೀನದ ದಕ್ಷಿಣ ಭಾಗದಲ್ಲಿರುವ ಶೆನೆjನ್‌ನಲ್ಲಿನ ಸಾನ್ಹೆ ಮಾರುಕಟ್ಟೆ ಕೂಡ ಹೊರತಾಗಿಲ್ಲ. ಆರ್ಥಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ ಈ ಮಾರುಕಟ್ಟೆಯಲ್ಲೂ ಚಟುವಟಿಕೆಗಳಲ್ಲಿ ಹಿಂದಿನ ಬಿರುಸಿಲ್ಲ. ಸಮಾಜಿಕ ಅಂತರ ಇತ್ಯಾದಿ ನಿಯಮಗಳ ಪಾಲನೆ ಇಲ್ಲಿ ಆಗುತ್ತಿದ್ದು, ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಬಣಗುಡುತ್ತಿದೆ. ಲಾಕ್‌ಡೌನ್‌ ಮುಗಿಯುವುದನ್ನೆ ಕಾದು ಕುಳಿತಿದ್ದ ಸಾವಿರಾರು ನಿರುದ್ಯೋಗಿಗಳೀಗ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ದೇಶದಲ್ಲಿ ಕೆಲವೇ ಕೆಲವು ಅಲ್ಪಾವಧಿ (ಪಾರ್ಟ್‌ ಟೈಂ) ಮತ್ತು ದೀರ್ಘಾವಧಿಯ ಉದ್ಯೋಗಕ್ಕೂ ಸ್ಪರ್ಧೆ ಏರ್ಪಟ್ಟಿದೆ. ಕಡಿಮೆ ವೇತನದ ಕೆಲಸಕ್ಕೂ ಈ ಮಾರುಕಟ್ಟೆಯಲ್ಲಿ ನೂರಾರು ಅರ್ಜಿಗಳು ಬಂದು ಬೀಳುತ್ತಿವೆ ಎಂದು ಅಲ್‌ಜಜೀರಾ ವರದಿ ಮಾಡಿದೆ.

ಬೇಡಿಕೆ ಕಳೆದುಕೊಂಡ ಚೀನ ಉತ್ಪನ್ನಗಳು
ಫೆಬ್ರವರಿ ಮಧ್ಯಾಂತರದಲೇ ಚೀನದಲ್ಲಿ ಉತ್ಪಾದನ ಘಟಕಗಳು ಮರುಪ್ರಾರಂಭಗೊಂಡಿದ್ದವು. ಆದರೆ ಕೆಲ ಘಟಕಗಳಿಗೆ ಉತ್ಪನ್ನ ಪೂರೈಕೆಗೆ ಅವಕಾಶವಿದ್ದರೂ, ಸರಬರಾಜು ಅಸಾಧ್ಯವಾಗುತ್ತಿದೆ. ಆದರೆ ಹಲವು ಕಂಪೆನಿಗಳು ಸಂಪೂರ್ಣವಾಗಿ ಬೇಡಿಕೆ ಕಳೆದುಕೊಂಡಿವೆ. ಚೀನದ ಆರ್ಥಿಕತೆ ಬೆಳವಣಿಗೆ ದರ ದಾಖಲೆಯ ಮಟ್ಟದಲ್ಲಿ ಕುಸಿತಗೊಂಡಿದೆ.ಹಾಗಾಗಿ ನಿರುದ್ಯೋಗ ಸಮಸ್ಯೆ ಹಠಾತ್‌ ಹೆಚ್ಚಾಗಬಹುದು ಎಂದು ಅಂದಾಜಿಸಿದ್ದು, 1992ರ ನಂತರದ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ. ದೇಶದ ಸ್ಥಿತಿ ಕುರಿತು ದಿ ಎಕನಾಮಿಕ್ಸ್ ಇಂಟೆಲಿಜೆನ್ಸ್ ಯುನಿಟ್‌ (ಇಐಯು) ಅಧ್ಯಯನ ನಡೆಸಿದ್ದು, ನಿರುದ್ಯೋಗ ಪ್ರಮಾಣ 2.5 ಕೋಟಿಗೆ ಏರಲಿದ್ದು, 25 ಕೋಟಿಯಷ್ಟು ಜನರು ವೇತನ ಕಡಿತ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಅಂದಾಜಿಸಿದೆ. ಮೊದಲ ತ್ತೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ 50 ಲಕ್ಷ ಇತ್ತು ಎನ್ನಲಾಗಿದೆ.

ಏರಲಿದೆ ನಿರುದ್ಯೋಗ ದರ
ಅಧಿಕೃತ ನಿರುದ್ಯೋಗ ದರ ಸುಮಾರು ಶೇ.10ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸುಮಾರು 30 ಕೋಟಿ ಆಂತರಿಕ ವಲಸೆ ಕಾರ್ಮಿಕರನ್ನು ಲೆಕ್ಕಕ್ಕೆ ಪರಿಗಣಿಸಿಲ್ಲ ಎಂದು ಹೇಳಲಾಗಿದೆ. ಫ್ರೆಂಚ್‌ ಹೂಡಿಕೆ ಬ್ಯಾಂಕ್‌ ಮತ್ತು ಹಣಕಾಸು ಸೇವೆಗಳ ಕಂಪನಿ ಸೊಸೈಟಿ ಜನರಲ್‌ ಅಂದಾಜಿನ ಪ್ರಕಾರ ಸುಮಾರು 70 ದಶಲಕ್ಷದಿಂದ 80 ದಶಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ. ನಗರ ನಿರುದ್ಯೋಗ ದರ ಶೇ.17 ಕ್ಕೆR ಏರಿದ್ದು, ನಗರ ಮತ್ತು ಗ್ರಾಮೀಣ ಎರಡು ಪ್ರದೇಶಗಳಲ್ಲೂ ನಿರುದ್ಯೋಗ ಸಮಸ್ಯೆ ಅಗಾಧ ಮಟ್ಟದಲ್ಲಿ ಪುಟಿದೇಳಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಭವಿಷ್ಯದ ಚಿಂತೆ
ಜೂನ್‌ ವೇಳೆಗೆ ಪದವಿ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಬೇಕು ಎಂಬ ಕನಸು ಕಂಡಿರುವ ಸುಮಾರು 8.7 ಲಕ್ಷ ವಿದ್ಯಾರ್ಥಿಗಳನ್ನು ದುರ್ಬಲಗೊಂಡಿರುವ ಆರ್ಥಿಕತೆ ವ್ಯವಸ್ಥೆ ನಿರಾಸೆಗೊಳಿಸಲಿದೆ. ಪ್ರತಿ ವರ್ಷ ನಾಲ್ಕರಿಂದ 5 ಲಕ್ಷ ವಿದ್ಯಾರ್ಥಿಗಳು ಉದ್ಯೋಗ ಅನ್ವೇಷಣೆಯಲ್ಲಿ ನಿರತರಾಗುತ್ತಿದ್ದರು. ಆದರೆ ಈ ವರ್ಷ ಸುಮಾರು 3 ಲಕ್ಷದಷ್ಟು ಏರಿಕೆಯಾಗಿದ್ದು, ಚೀನಕ್ಕೆ ಭವಿಷ್ಯದ ಅನಿಶ್ಚಿತತೆ ಕಾಡುತ್ತಿದೆ. 2.3 ಲಕ್ಷ ಉದ್ಯೋಗ ನೇಮಕಾತಿ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ.41.2ರಷ್ಟು ಕಡಿತವಾಗಿದೆ.
ಉದ್ಯೋಗವನ್ನು ಅರಸಿ ಬರುತ್ತಿರುವ ಪದವೀಧರರನ್ನು ನೇಮಿಸಿಕೊಳ್ಳಲು ಚೀನ ಸರಕಾರಿ ಸ್ವಾಮ್ಯದ ಉದ್ಯಮಗಳು ತಯಾರಾಗುತ್ತಿವೆ ಎಂದು ತಿಳಿಸಿದೆ. ಆದರೆ ಮೊದಲ ತ್ರೆ„ಮಾಸಿಕದಲ್ಲಿ ಆ ಕಂಪನಿಗಳ ಲಾಭ ಶೇ.60 ರಷ್ಟು ಕಡಿಮೆಯಾಗಿದ್ದು, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ರಾಜ್ಯ ಕೌನ್ಸಿಲ್‌ ವರದಿಯ ಅಂಕಿಅಂಶಗಳ ಪ್ರಕಾರ, ಈ ಉದ್ಯಮಗಳಲ್ಲಿ ಉದ್ಯೋಗ ಅವಕಾಶ ಇದೆ ಎಂಬುದಕ್ಕೆ ಯಾವುದೇ ಸ್ಟಷ್ಟತೆ ಇಲ್ಲ ಹಾಗೂ ಯಾವ ತೆರನಾದ ಉದ್ಯೋಗಗಳಿವೆ ಎಂಬುದರ ಬಗ್ಗೆಯೂ ಖಚಿತ ಮಾಹಿತಿ ಇಲ್ಲ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next