Advertisement

ಹೆಚ್ಚುತ್ತಿಲ್ಲ ತುಂಗಭದ್ರಾ ಒಳಹರಿವು

03:37 PM Jul 19, 2017 | Team Udayavani |

ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಒಳ ಹರಿವಿನ ಪ್ರಮಾಣ ಸುಧಾರಣೆ ಕಾಣುತ್ತಲೇ
ಇಲ್ಲ. ಈವರೆಗೂ ಜಲಾಶಯದಲ್ಲಿ ಕೇವಲ 15 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಈ ಇದೇ ವೇಳೆಗೆ 38 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ವರ್ಷದ ಮಳೆ ಕೊರತೆಯ ಪರಿಸ್ಥಿತಿಗೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕ ವ್ಯಕ್ತ ಪಡಿಸುವಂತಾಗಿದೆ.

Advertisement

ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ 12 ಲಕ್ಷಕ್ಕೂ ಅಧಿಕ ರೈತರು ಭತ್ತ ಸೇರಿದಂತೆ ಇತರೆ ಬೆಳೆ ಬೆಳೆದು ಜೀವನ
ನಡೆಸುತ್ತಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಜಲಾಶಯಕ್ಕೆ ನೀರು ಹರಿದು ಬರುವಿಕೆಯ ಪ್ರಮಾಣ ಕ್ಷೀಣಿಸಲಾರಂಭಿಸುತ್ತಿದೆ.
ಜಲಾಶಯ ಭರ್ತಿಯಾಗಬೇಕೆಂದರೆ ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶ ಭಾಗದಲ್ಲಿ ಸಮೃದ್ಧಿ ಮಳೆಯಾದರೆ ಮಾತ್ರ
ನೀರು ಹರಿದು ಬರದಲಿದೆ. ಆದರೆ ಆ ಭಾಗದಲ್ಲಿಯೇ ಈ ವರ್ಷ ಮಳೆ ಕೊರತೆ ಕಾಡಲಾರಂಭಿಸಿದೆ. ಇದು ತುಂಗಭದ್ರ
ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಿಸುತ್ತಿದೆ. 

ಕೇವಲ 15 ಟಿಎಂಸಿ ಸಂಗ್ರಹ: ಪ್ರಸ್ತುತ ತುಂಗಭದ್ರ ಜಲಾಶಯದಲ್ಲಿ ಮಂಗಳವಾರದ ಅಂತ್ಯಕ್ಕೆ ಕೇವಲ 15 ಟಿಎಂಸಿ ನೀರು ಮಾತ್ರ
ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಜಲಾಶಯಕ್ಕೆ 38 ಟಿಎಂಸಿ ನೀರು ಹರಿದು ಬಂದಿತ್ತು. ಈ ವರ್ಷ ಇದರ ಅರ್ಧದಷ್ಟು ನೀರು ಹರಿದು ಬಂದಿಲ್ಲ. ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವೇ ಆಗುತ್ತಿಲ್ಲ. ಕೇವಲ 3-4 ಸಾವಿರ ಕ್ಯೂಸೆಕ್‌ನ ಅಂತರದಲ್ಲಿಯೇ ಒಳ ಹರಿವಿನ ಪ್ರಮಾಣವಿದೆ. ಕಳೆದ ವರ್ಷ 8 ರಿಂದ 10 ಸಾವಿರ ಕ್ಯೂಸೆಕ್‌ ಅಂತರದಲ್ಲಿ ಜಲಾಶಯದ ಒಳ ಹರಿವು ಇರುತ್ತಿತ್ತು. ಶಿವಮೊಗ್ಗ ಸೇರಿದಂತೆ ಇತರೆ ಭಾಗದಲ್ಲಿ ಮಳೆಯಾಗುವ  ಲಕ್ಷಣವಿದೆ ಎನ್ನುವ ವರದಿ ಹವಾಮಾನ ಇಲಾಖೆ ನೀಡಿದ್ದರೂ ಹೇಳಿಕೊಳ್ಳುವಂತಹ ಮಳೆಯಾಗುತ್ತಿಲ್ಲ ಎನ್ನುವ ಮಾತುಗಳು ಜಲಾಶಯದ ಅಧಿ ಕಾರಿಗಳ ವರ್ಗದಿಂದಲೇ ತಿಳಿದು ಬಂದಿದೆ.

2003ರಲ್ಲೂ ಈ ವರ್ಷದ ಪರಿಸ್ಥಿತಿಯಂತೆ ನೀರಿನ ಕೊರತೆ ಎದುರಾಗಿತ್ತು. ಆಗಲೂ ರೈತರಲ್ಲಿ ಬೆಳೆಗೆ ನೀರು ಲಭಿಸುವುದೋ?
ಇಲ್ಲವೋ ಎನ್ನುವ ಆತಂಕ ಮನೆ ಮಾಡಿತ್ತು. ಈ ವರ್ಷವೂ ಅದೇ ಪರಿಸ್ಥಿತಿ ಬಂದೊದಗಲಿದೆಯೇ? ಎನ್ನುವ ಆತಂಕ ರೈತರಲ್ಲಿ ಮೂಡಲಾರಂಭಿಸಿದೆ. ಪ್ರತಿ ವರ್ಷದಂತೆ ಜಲಾಶಯದ ನೀರನ್ನು ಜುಲೈ ಕೊನೆಯ ವಾರದಲ್ಲಿ ಕಾಲುವೆಗೆ ನೀರು ವಿವಿಧ ಹಂತದಲ್ಲಿ ಬಿಡಲಾಗುತ್ತಿತ್ತು. ಆದರೆ ಈ ವರ್ಷ ಜಲಾಶಯದಲ್ಲೇ ನೀರಿನ ಕೊರತೆ ಎದುರಾಗಿದ್ದು, ತುಂಗಭದ್ರಾ ಜಲಾಶಯದ ಮಂಡಳಿಗೂ ನೀರಿನ ನಿರ್ವಹಣೆ ಮಾಡುವುದು ದೊಡ್ಡ ಸವಾಲಿನ  ಕೆಲಸವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರೂ ಒಳ ಹರಿವಿನ ಹೆಚ್ಚಳದ ಕುರಿತು
ಆಶಾ ಭಾವನೆಯಿಟ್ಟಿದ್ದಾರೆ. 

ಶಿವಮೊಗ್ಗ ಭಾಗದಲ್ಲಿ ಮಳೆಯ ಕೊರತೆ ಇರುವ ಕಾರಣ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಳೆದ ವರ್ಷಕ್ಕಿಂತಲೂ ಕಡಿಮೆಯಿದೆ.
ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಕುರಿತು ನಾವು ನಿರೀಕ್ಷೆಯಿಟ್ಟಿದ್ದೇವೆ. ಪ್ರತಿ ವರ್ಷ ಜುಲೈ ಕೊನೆಯ ವಾರ ಹಾಗೂ ಆಗಸ್ಟ್‌ನಲ್ಲಿ ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಈ ವರ್ಷ ಐಸಿಸಿ ಸಭೆ ನಡೆದ ಬಳಿಕ ದಿನಾಂಕ ನಿಗದಿಯಾಗಲಿದೆ.
ಡಿ.ರಂಗಾರಡ್ಡಿ, ಕಾರ್ಯದರ್ಶಿ,  ತುಂಗಭದ್ರಾ ಮಂಡಳಿ,

Advertisement

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next