Advertisement
ತಾಲಿಬಾನ್ ಈಗಾಗಲೇ ಮಹಿಳೆಯರಿಗೆ ಸಾಕಷ್ಟು ಫತ್ವ ಹೊರಡಿಸಿದ್ದು, ಈಗ ಮಹಿಳೆಯರು ಹೊರಗಡೆ ಕಾಲಿಡದಂತೆ ಕಟ್ಟಪ್ಪಣೆ ಹೊರಡಿಸದೆ ಎನ್ನಲಾಗಿದೆ.
Related Articles
Advertisement
ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವ ಬ್ಯಾಂಕ್ ಆಫ್ಘಾನಿಸ್ತಾನದಲ್ಲಿ ನಿಧಿಯನ್ನು ಸ್ಥಗಿತಗೊಳಿಸಿದ ನಂತರ ತಾಲಿಬಾನ್ ನಿಂದ ಈ ನಿರ್ದೇಶನ ಬಂದಿದೆ. ಇನ್ನು, ತಾಲಿಬಾನ್ ಸ್ವಾಧೀನದಿಂದ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳ ಬಗ್ಗೆ “ಪಾರದರ್ಶಕ ಮತ್ತು ತ್ವರಿತ ತನಿಖೆಗೆ” ಯುಎನ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್ ಮತ್ತೆ ಹೊಸದೊಂದು ಪ್ರಹಸನ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.
ಈ ಹಿಂದೆಯೂ ಕೂಡ ಜಬಿವುಲ್ಲಾ ಮುಜಾಹಿದ್, ಮಹಿಳೆಯರ ಸುರಕ್ಷತೆಯ ಬಗ್ಗೆ ಪತ್ರಿಕಾಗೋಷ್ಠಿ ಕರೆದು, ಈ ದೇಶದ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ. ಶರಿಯಾ ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಹಕ್ಕುಗಳನ್ನು ಮಹಿಳೆಯರಿಗೆ ಕಲ್ಪಿಸುತ್ತೇವೆ. ಮಹಿಳೆಯರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುತ್ತೇವೆ. ಮಹಿಳೆಯರ ವಿರುದ್ಧ ಯಾವುದೇ ದೌರ್ಜನ್ಯಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದರು.
ಮಾಧ್ಯಮಗಳಿಗೂ ಕೆಲವೊಂದು ನಿರ್ದೇಶನ ನೀಡಿರುವ ಜಬೀಹುಲ್ಲಾ, ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಸುದ್ದಿಗಳನ್ನು ಬಿತ್ತರಿಸಬಾರದು. ಸುದ್ದಿಗಳು ನಿಷ್ಪಕ್ಷಪಾತವಾಗಿರಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಸುದ್ದಿಗಳನ್ನು ಯಾರೂ ಪ್ರಸಾರ ಮಾಡಬಾರದು ಎಂದಿದ್ದರು.
“ನಾವು ಯಾವುದೇ ದೇಶದೊಂದಿಗೆ ಯಾವುದೇ ಯುದ್ಧವನ್ನು ಪುನರಾವರ್ತಿಸಲು ಬಯಸುವುದಿಲ್ಲ.ನಾವು ಶಾಂತಿಯುತವಾಗಿ ಬದುಕಲು ಬಯಸುತ್ತೇವೆ ಎಂದಿರುವ ಅವರು, ಎಮಿರೇಟ್ಸ್ ಪಡೆಗಳು ಕಾಬೂಲ್‌ಗೆ ಪ್ರವೇಶಿಸಿದ ವೇಳೆ ಕೆಲವು ಗಲಭೆಕೋರರು ಇದ್ದರು. ಅವರ ವಿರುದ್ಧ ಕಾದಾಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ದಿನದಿಂದ ದಿನಕ್ಕೆ ಹೆಚ್ಚಿನ ಭದ್ರತೆಗಳು ಇರುತ್ತವೆ ಎಂದು ಹೇಳಿದ್ದರು.
ಆದಾಗ್ಯೂ, ಅಫ್ಗಾನಿಸ್ತಾನದಲ್ಲಿ ಮಹಿಳೆಯರನ್ನು ಶವಪೆಟ್ಟಿಯಲ್ಲಿ ವಿದೇಶಗಳಿಗೆ ಕಳಹಿಸಿ ಸೆಕ್ಸ್ ದಂಧೆಗೆ ದೂಡಲಾಗುತ್ತಿದೆ ಹಾಗೂ ಬಲವಂತವಾಗಿ ತಾಲಿಬಾನ್ ಉಗ್ರರು ಮದುವೆಯಾಗುತ್ತಿದ್ದಾರೆ, ಶರಿಯಾ ಕಾನೂನುಗಳನ್ನು ಉಲ್ಲಂಘನೆಯ ಹೆಸರಿನಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಹಿಂಸಿಸಲಾಗುತ್ತಿದೆ, ಹೆಡ್ ಶೂಟ್ ಮಾಡಲಾಗುತ್ತಿದೆ ಎಂಬುವುದಾಗಿ ವರದಿಯಾಗಿದ್ದವು.
ಇನ್ನು, ಇತ್ತೀಚೆಗಷ್ಟೇ ತಾಲಿಬಾನ್ ಮಹಿಳೆಯರಿಗಾಗಿ ಶರಿಯಾ ಫತ್ವವನ್ನು ಹೊರಡಿಸಿತ್ತು, ತಾಲಿಬಾನ್ ಹೊರಡಿಸಿರುವ ಫತ್ವಾದಲ್ಲಿ ನೈಲ್ ಪಾಲಿಶ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಯಾರಾದರೂ ನೈಲ್ ಪಾಲಿಶ್ ಹಾಕಿರುವುದು ಕಂಡುಬಂದರೆ, ಅಂತಹವರ ಬೆರಳುಗಳನ್ನು ಕತ್ತರಿಸಲಾಗುತ್ತದೆ ಎಂದಿದೆ. ಮಾತ್ರವಲ್ಲದೇ, ಮಹಿಳೆಯರಿಗೆ ಪಾದರಕ್ಷೆಗಳನ್ನು ಧರಿಸುವುದರ ಮೇಲೂ ನಿಷೇಧ ಹೇರಿದ್ದು, ಹೀಲ್ ಸ್ಯಾಂಡಲ್ ಗಳನ್ನು ಧರಿಸದಂತೆ ತಾಲಿಬಾನ್ ಖಡಕ್ ವಾರ್ನ್ ಮಾಡಿತ್ತು.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,164 ಕೋವಿಡ್ ಪ್ರಕರಣ ಪತ್ತೆ, ಶೇ.22.7ರಷ್ಟು ಏರಿಕೆ